ಶನಿವಾರಸಂತೆ: ಜು.೧೩ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಬಿದ್ದಿದ್ದ ಚಿನ್ನದ ಮಾಂಗಲ್ಯ ಸರವೊಂದನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪತ್ರಕರ್ತರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಕಾಶ್ಚಂದ್ರ ಕಾರ್ಯ ನಿಮಿತ್ತ ಗ್ರಾಮ ಪಂಚಾಯಿತಿಗೆ ತೆರಳಿದ್ದಾಗ ಬಿದ್ದುಸಿಕ್ಕಿದ್ದ ಮಾಂಗಲ್ಯ ಸರವನ್ನು ಪಂಚಾಯಿತಿ ಸಿಬ್ಬಂದಿಗೆ ನೀಡಿ, ಕಳೆದುಕೊಂಡವರು ಅವರಿಗೆ ಬಂದರೆ ತಿಳಿಸುವಂತೆ ಹೇಳಿದ್ದರು.ಅದರಂತೆ ವಿಷಯ ತಿಳಿದು ಮಾಂಗಲ್ಯ ಸರ ಕಳೆದುಕೊಂಡಿದ್ದ ಹಾಡಿಯ ಗಂಗಮ್ಮ ಎಂಬ ಗೃಹಿಣಿ ಪಂಚಾಯಿತಿಗೆ ಬಂದು ರೂ.೯೦ ಸಾವಿರ ಮೌಲ್ಯದ ತಮ್ಮ ಸರ ಕಳೆದು ಹೋಗಿದೆ ಎಂದು ಗುರುತು ಹೇಳಿದರು. ಬಳಿಕ ಪ್ರಕಾಶ್ಚಂದ್ರ ಅವರು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ.ಬೋಜಪ್ಪ, ಸಿಬ್ಬಂದಿಗಳಾದ ರವಿ, ಪೂರ್ಣಿಮಾ, ಮಾಲಾ, ಭಾರತಿ, ಅಶ್ವಿನಿ ಅವರ ಸಮ್ಮುಖದಲ್ಲಿ ಮಾಂಗಲ್ಯ ಸರವನ್ನು ಗಂಗಮ್ಮ ಅವರಿಗೆ ಹಸ್ತಾಂತರಿಸಿದರು.