ಗೋಣಿಕೊಪ್ಪಲು. ಜು. ೧೩: ಕೆಂಪೇಗೌಡ ಜಯಂತಿ ಅಂಗವಾಗಿ ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಹಾತೂರಿನ ಮಹದೇಶ್ವರ ದೇವಾಲಯ ಸಮೀಪದ ದೊಡ್ಡಮನೆ ತಮ್ಮಯ್ಯ ಅವರ ಗದ್ದೆಯಲ್ಲಿ ಸಂಭ್ರಮ-ಸಡಗರದೊAದಿಗೆ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.

ಓಟ, ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್, ಸೇರಿದಂತೆ ನಾನಾ ರೀತಿಯ ಕ್ರೀಡೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಭಾಗವಹಿಸಿ ಕೆಸರಿನೋಕುಳಿಯಲ್ಲಿ ಮಿಂದೆದ್ದರು. ಕ್ರೀಡೋತ್ಸವದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಸೇರಿದಂತೆ ಅನೇಕ ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾದರು. ಕೋಟೆಕೊಪ್ಪ, ಕಾಕೋಟುಪರಂಬು, ಕಣ್ಣಂಗಾಲ -ಒಂಟಿಯAಗಡಿ, ಕೈಕೇರಿ, ಗೊಟ್ಟಡ, ಕಳತ್ಮಾಡು ಮೈತಾಡಿ, ಅಮ್ಮತ್ತಿ, ಚೆನ್ನಂಗಿ, ತಿತಿಮತಿ, ದೇವರಪುರ, ಸೀಗೆತೋಡು, ಗೋಣಿಕೊಪ್ಪ, ಪೊನ್ನಂಪೇಟೆ- ಕಿರುಗೂರು, ಕೋತೂರು, ಕುಟ್ಟ ಪೂಜೆಕಲ್ಲು, ಬಾಳೆಲೆ, ನಿಟ್ಟೂರು ಕಾರ್ಮಾಡು, ಕೊಟ್ಟಗೇರಿ, ವೀರಾಜಪೇಟೆ ಮಗ್ಗುಲ ಗ್ರಾಮ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದವರು ಪಾಲ್ಗೊಂಡರು.

ಒಗ್ಗಟ್ಟಿಗೆ ಕ್ರೀಡೆ ಸಹಕಾರಿ : ಮಂತರ್

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಮುದಾಯ ಬಾಂಧವರ ಒಗ್ಗಟ್ಟಿಗೆ ಕ್ರೀಡೆ ಸಹಕಾರಿ. ಈ ನಿಟ್ಟಿನಲ್ಲಿ ಒಕ್ಕಲಿಗ ಸಮಾಜ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಪ್ರತಿವರ್ಷವು ಸಮುದಾಯ ಬಾಂಧವರ ಒಗ್ಗೂಡುವಿಕೆಗೆ ಪ್ರಯತ್ನಗಳು ನಡೆಯಬೇಕು. ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕು ಎಂದರು.

ಪ್ರತಿವರ್ಷ ನಡೆಯಲಿ : ಹರಪಳ್ಳಿ ರವೀಂದ್ರ

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಕ್ರೀಡೆಗೆ ಮಾತ್ರ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ಶಕ್ತಿ ಇದೆ. ಅದ್ದರಿಂದ ವರ್ಷಂಪ್ರತಿ ವಿವಿಧ ಕ್ರೀಡೋತ್ಸವಗಳು ನಡೆಯುವಂತಾಗಲಿ ಸಮಾಜ ಬಾಂಧವರ ಒಗ್ಗಟ್ಟಿನೊಂದಿಗೆ ಸಹಕಾರವು ಲಭಿಸುವಂತಾಗಲಿ, ಒಕ್ಕಲಿಗರ ಸಮಾಜದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುತ್ತದೆ. ಪ್ರತಿ ವರ್ಷವು ಒಕ್ಕಲಿಗರ ಸಮಾಜದಿಂದ ಕ್ರೀಡೋತ್ಸವ ನಡೆಯಲಿ ಎಂದು ಆಶಿಸಿದರು.

ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಜೆ.ಮಧುಸೂಧನ್ ಮಾತನಾಡಿ ೫ನೇ ವರ್ಷದ ಒಕ್ಕಲಿಗರ ಕೆಸರುಗದ್ದೆ ಕ್ರೀಡಾಕೂಟವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಮುದಾಯ ಬಾಂಧವರು ಹೆಚ್ಚಿನ ಸಹಕಾರ ಹಾಗೂ ಸಹಭಾಗಿತ್ವ ನೀಡಿದ ಹಿನ್ನಲೆಯಲ್ಲಿ ಗ್ರಾಮೀಣ ಸೊಗಡು ಕಾಣಲು ಸಾಧ್ಯವಾಗಿದೆ ಎಂದರು.

ಕ್ರೀಡಾಕೂಟದ ಅಧ್ಯಕ್ಷ ಹಂಚಿನಮನೆ ಡಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಜಿ. ಮಧುಸೂಧನ್ ಹಾತೂರು ಗ್ರಾಮದ ಕಾಫಿ ಬೆಳೆಗಾರದೊಡ್ಡಮನೆ ಕೀರ್ತಿ ಕಿರಣ್, ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಜಿ.ಅನಿಲ್ ಕುಮಾರ್, ಸ್ಥಳ ದಾನಿಗಳಾದ ಡಿ.ಇ. ತಿಮ್ಮಯ್ಯ, ಕಾಫಿ ಬೆಳೆಗಾರ ದೊಡ್ಡಮನೆ ಎ.ಚಂದ್ರಶೇಖರ್, ದೊಡ್ಡಮನೆ ಎ. ಗೋಪಾಲಕೃಷ್ಣ, ಹೆಚ್.ಎಂ. ಗೋಪಾಲ ಕೃಷ್ಣ, ವಿ.ಎಸ್. ರಾಮಚಂದ್ರ, ವಿ.ಎಂ. ಅಶೋಕ್ ಕುಮಾರ್, ವಿ.ಎಸ್. ಸುರೇಂದ್ರ, ವಿ.ಆರ್. ರಮೇಶ್, ಡಿ.ಇ. ವಿಠಲ, ಹಂಚಿನಮನೆ ಜಯಲಕ್ಷಿö್ಮ ರಾಜು, ಹಂಚಿನಮನೆ ಸುಶೀಲ ರಾಮಕೃಷ್ಣ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ದೊಡ್ಡಮನೆ ತೀರ್ಥ ಮಂಜುನಾಥ್ ಸ್ವಾಗತಿಸಿ, ಚಂದನ ಮಂಜುನಾಥ್ ನಿರೂಪಿಸಿ, ವಂದಿಸಿದರು. - ಹೆಚ್.ಕೆ.ಜಗದೀಶ್