ಕೂಡಿಗೆ, ಜು.೧೩ : ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಪರಿಸರ ಪ್ರೇಮಿ, ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದು, ಜೂನ್ ೨೦೨೬ ಕ್ಕೆ ಸೇವಾ ನಿವೃತ್ತಿ ಹೊಂದಿದ ಟಿ.ಜಿ .ಪ್ರೇಮ್‌ಕುಮಾರ್ ಅವರನ್ನು ಶಾಲೆಯಲ್ಲಿ ಎಸ್.ಡಿ.ಎಂ.ಸಿ., ಶಾಲಾ ಶಿಕ್ಷಕ ವೃಂದ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

“ಪರಿಸರಕ್ಕಾಗಿ ನಾವು”- ಮಕ್ಕಳ ಪರಿಸರ ಸಂಭ್ರಮ: ೨೦೨೬ ದೊಂದಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ವೃಂದ, ವಿವಿಧ ಶಾಲಾ- ಕಾಲೇಜುಗಳು, ವಿವಿಧ ಸಂಘ- ಸಂಸ್ಥೆಗಳು ಸೇರಿದಂತೆ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿ , ಗ್ರಾಮಸ್ಥರು ಹಾಗೂ ನಾಗರಿಕರು ಜತೆಗೂಡಿ ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಿದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ತಮ್ಮ ಶೈಕ್ಷಣಿಕ, ವಿಜ್ಞಾನ ಹಾಗೂ ಪರಿಸರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಟಿ.ಜಿ. ಪ್ರೇಮ್‌ಕುಮಾರ್ ಅವರು ನಿವೃತ್ತಿ ನಂತರವೂ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು. ಈ ಪ್ರೌಢಶಾಲೆ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಗಳಿಸುವಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯವಾದುದು. ಪೋಷಕರು ತಮ್ಮ ಮಕ್ಕಳಿಗೆ ಇಂತಹ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಪ್ರೇಮ್‌ಕುಮಾರ್ ಅವರ ಪರಿಸರ ಕಾಳಜಿ ಶ್ಲಾಘನೀಯವಾದುದು. ವಿದ್ಯಾರ್ಥಿಗಳು ಕೂಡ ಪ್ರೇಮ್‌ಕುಮಾರ್ ಅವರಂತೆ ಶಿಕ್ಷಣದ ಜೊತೆಗೆ ಪರಿಸರದ ಸಂರಕ್ಷಣೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು. ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ಪಿ.ರಮೇಶ್, ಟಿ.ಜಿಪ್ರೇಮ್‌ಕುಮಾರ್, ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ವಿಜ್ಞಾನ ಮತ್ತು ಪರಿಸರಕ್ಕೆ ಸಂಬAಧಿಸಿದAತೆ ಜನ ಜಾಗೃತಿ ಮೂಡಿಸುತ್ತಿರುವುದು ಮಾದರಿಯಾದುದು ಎಂದು ಶ್ಲಾಘಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಟಿ.ಜಿ.ಪ್ರೇಮ್‌ಕುಮಾರ್ ಅವರು ಶೈಕ್ಷಣಿಕ ಮತ್ತು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡAತೆ ಮುಂದಿನ ದಿನಗಳಲ್ಲಿ ಸಾಹಿತ್ಯ- ಸಂಸ್ಕೃತಿ ಬೆಳವಣಿಗೆಗೂ ಹೆಚ್ಚಿನ ಆದ್ಯತೆ ನೀಡಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಜಿ.ಪ್ರೇಮ್‌ಕುಮಾರ್, ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಶ್ರಮಿಸಿದ ಎಸ್.ಡಿ.ಎಂ.ಸಿ., ಶಿಕ್ಷಕರು ಪೋಷಕರು ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಶಿಕ್ಷಣವೇ ಶಕ್ತಿ, ವಿಜ್ಞಾನವೇ ಸತ್ಯ, ಪರಿಸರವೇ ನಮ್ಮ ಉಸಿರು. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕೂಡಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಮಾತನಾಡಿ, ಪ್ರೇಮ್‌ಕುಮಾರ್ ಅವರು ಶಿಕ್ಷಣ, ವಿಜ್ಞಾನ, ಪರಿಸರ ಕುರಿತಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ ಎಂದರು. ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಟಿ.ಜಿ.ಪ್ರೇಮ್‌ಕುಮಾರ್ ಅವರ ಪರಿಸರ ಕಾಳಜಿ ಅನನ್ಯವಾದುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಾ ಜೆ.ಸೋಮಣ್ಣ, ವೃತ್ತಿಯ ಜತೆಗೆ ಸಮಾಜದ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಿ.ಜಿ. ಪ್ರೇಮ್‌ಕುಮಾರ್ ಅವರ ಸೇವಾ ಕಾರ್ಯ ಅನನ್ಯವಾದುದು ಎಂದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್, ಸರ್ಕಾರಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ ಪರಶಿವಮೂರ್ತಿ, ಪ್ರಾಧ್ಯಾಪಕ ಡಾ ಸೀನಪ್ಪ, ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾದ ಎಂ.ಕೆ.ನಾಗರಾಜ್, ಆರ್.ಜಿ. ಮಹಾದೇವಸ್ವಾಮಿ, ಎನ್. ಮಹಾದೇವಪ್ಪ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜೆ.ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿದರು.

ಎಸ್‌ಡಿಎಂಸಿ ಸದಸ್ಯೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಇ.ಸುಲೇಮಾನ್, ಮೆ.ನಾ.ವೆಂಕಟನಾಯಕ್, ಟಿ.ಬಿ. ಮಂಜುನಾಥ್, ಕೆ.ವಿ. ಉಮೇಶ್, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಪವನ್ ಕುಮಾರ್, ರಂಗಭೂಮಿ ಕಲಾವಿದ ಭರಮಣ್ಣ ಟಿ.ಬೆಟಗೇರಿ, ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್ , ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಶಿಕ್ಷಕಿ ಟಿ.ವಿ.ಶೈಲಾ, ನಿವೃತ್ತ ಉಪನ್ಯಾಸಕರಾದ ಎಚ್.ಎಚ್. ಸುಂದರ್, ಎಚ್.ಎಸ್. ಗುರುಸ್ವಾಮಿ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಎಚ್.ಆರ್.ಮುತ್ತಪ್ಪ, ಟಿ.ಎಂ.ಮುದ್ದಯ್ಯ, ಕೆ.ಯು.ರಂಜಿತ್, ಸಿ.ಎಂ. ಸುಲೋಚನಾ, ಯು.ಸಿ. ದಮಯಂತಿ, ಗ್ರಾಮದ ಮುಖಂಡರಾದ ಕೆ.ಎಸ್. ರಾಜಾಚಾರಿ, ಜವರೇಗೌಡ, ವಿಜ್ಞಾನ ಸಂವಹನಕಾರ ಜಿ.ಶ್ರೀನಾಥ್, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ. ನಾಗರಾಜ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಈರಪ್ಪ, ಎಸ್.ಎನ್.ಪುಟ್ಟಸ್ವಾಮಿ,ಎ.ಎಂ. ಜವರಯ್ಯ, ಈರಪ್ಪ, ಸಹಕಾರಿಗಳಾದ ಕೆ.ಎಸ್. ಕೃಷ್ಣೇಗೌಡ, ಟಿ.ಬಿ.ಜಗದೀಶ್, ಟಿ.ಕೆ. ಪಾಂಡುರAಗ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು , ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ನಾಗರೀಕರು ಇದ್ದರು. ಶಿಕ್ಷಕ ಮೆ.ನಾ.ವೆಂಕಟನಾಯಕ್ ಕಾರ್ಯಕ್ರಮ ನಿರ್ವಹಿಸಿದರು.