ಕೂಡಿಗೆ, ಜು. ೧೩: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಯಿತು.

ರಾಷ್ಟಿçÃಯ ಉಪಾಧ್ಯಕ್ಷ ಜಿತೇಶ್ ಅಡ್ವಾಣಿ ಹಾಗೂ ವಲಯ ಅಧ್ಯಕ್ಷ ಪ್ರಜ್ವಲ್ ಎಸ್. ಜೈನ್ ಅವರ ಉಪಸ್ಥಿತಿಯಲ್ಲಿ ಹಾರಂಗಿ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ಸಿಸಿಟಿವಿ ಭದ್ರತಾ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಪ್ಯೂರಿಫೈಯರ್ ಹಾಗೂ ವಿದ್ಯಾರ್ಥಿಗಳಿಗಾಗಿ ಕುರ್ಚಿಗಳನ್ನು ವಿತರಿಸಲಾಯಿತು.

ಇದೇ ವೇಳೆ ಕೂಡಿಗೆ ದೇವಸ್ಥಾನದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಾಟರ್ ಪ್ಯೂರಿಫೈಯರ್ ಅನ್ನು ಲೋಕಾರ್ಪಣೆ ಮಾಡಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟಿçÃಯ ಉಪಾಧ್ಯಕ್ಷ ಜಿತೇಶ್ ಅಡ್ವಾಣಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳು ಅವಶ್ಯಕ. ಜೆಸಿಐ ಕುಶಾಲನಗರ ಕಾವೇರಿ ಕೈಗೊಂಡಿರುವ ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಸಮಾಜದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಜೆಸಿಐ ಕುಶಾಲನಗರ ಕಾವೇರಿ ಸೇರಿದಂತೆ ಸಮಾಜಮುಖಿ ಸಂಘ-ಸAಸ್ಥೆಗಳ ಸಹಕಾರದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳು ದೊರೆಯುತ್ತಿವೆ. ಈ ಸೇವೆ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಶ್ರೀನಿವಾಸ್, ಜೆಸಿಐ ಇಂಡಿಯಾ ವಲಯ-೧೪ರ ಝೋನ್ ಅಧಿಕಾರಿ ರಜನಿಕಾಂತ್ ಎಂ.ಜೆ., ತೇಜಾ ದಿನೇಶ್, ಪೂರ್ವ ವಲಯ ಉಪಾಧ್ಯಕ್ಷ ಜಗದೀಶ್ ಬಿ., ಕಾರ್ಯದರ್ಶಿ ಎಅ ನಿಶಾಂತ್ ಶೌರ್ಯ, ಜೆಸಿಐ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು, ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.