ಮಡಿಕೇರಿ, ಜು. ೧೧ ; ಚುನಾವಣೆ ಸಂದರ್ಭ ಆತುರಾತುರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆಯಾದರೂ ಎಲ್ಲರಿಗೂ ಮತದಾನದ ಹಕ್ಕು ದೊರಕಬೇಕು, ಯಾರೂ ಕೂಡ ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು ಎಂಬ ನಿಲುವು ಕಾಂಗ್ರೆಸ್ ಪಕ್ಷದ್ದಾಗಿದೆ. ಈ ನಿಟ್ಟಿನಲ್ಲಿ ದಾಖಲೆಗಳಿಲ್ಲದವರಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವಂತಾಗಬೇಕೆAದು ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ; ಬಡವರ್ಗದವರು, ಕಾರ್ಮಿಕರು ಸೇರಿದಂತೆ ಅನೇಕರಿಗೆ ಚುನಾವಣಾ ಆಯೋಗ ಕೇಳಿರುವ ೧೧ ದಾಖಲೆಗಳಲ್ಲಿ ಕೆಲವೊಂದು ದಾಖಲೆಗಳಿರುವದಿಲ್ಲ. ೨೦೦೨ರ ಪರಿಷ್ಕರಣೆ ಸಂದರ್ಭ ಕೂಡ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ತಹಶೀಲ್ದಾರರ ಮೂಲಕ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರಲ್ಲದೆ, ಪ್ರಮಾಣ ಪತ್ರವನ್ನು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ವಿತರಿಸುವಂತಾಗಬೇಕೆAದು ಒತ್ತಾಯಿಸಿದರು.

ಮತದಾನದ ಹಕ್ಕು ಪ್ರತಿಯೊಬ್ಬರಿಗೂ ಸಿಗಬೇಕು, ಯಾರೂ ಬಿಟ್ಟು ಹೋಗಬಾರದು, ಒಂದು ವೇಳೆ ಬಿಟ್ಟುಹೋದಲ್ಲಿ ಮುಂದಕ್ಕೆ ಸೇರ್ಪಡೆಗೆ ಅವಕಾಶ ನೀಡಬೇಕು. ಅನಕ್ಷರಸ್ತರಲ್ಲಿ ದಾಖಲೆಗಳಿರುವದಿಲ್ಲ, ಅಂತಹ ವರಿಗೆ ದಾಖಲೆ ಸೃಷ್ಟಿ ಮಾಡಿ ನೀಡಬೇಕಾಗಿರುವದು ಚುನಾವಣಾ ಆಯೋಗದ ಕೆಲಸ. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಜನರು ಗೊಂದಲಕ್ಕೀಡಾಗಿದ್ದು, ತಮ್ಮ ಹಕ್ಕು ಕಳೆದುಕೊಳ್ಳುತ್ತೇವೆಂಬ ಭಯದಲ್ಲಿದ್ದಾರೆ. ಇದರಿಂದ ಅರ್ಹರೂ ಕೂಡ ಹಕ್ಕು ವಂಚಿತರಾಗುವ ಸಾಧ್ಯತೆಗಳಿವೆ. ಯಾರಿಗೂ ಅನ್ಯಾಯವಾಗಬಾರದು, ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಗೊಂದಲಗಳನ್ನು ನಿವಾರಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮತದಾನ ಎಂಬದು ಒಂದು ಪ್ರಕ್ರಿಯೆಯಾಗಿದ್ದು, ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು, ಇಂತಹವರಿಗೇ ಹಾಕುತ್ತಾರೆ ಎಂದು ಹೇಳಲಾಗದು. ಅದು ಅವರವರ ಹಕ್ಕು. ವಲಸಿಗರಿಗೆ, ಬೇರೆ ದೇಶದವರಿಗೆ ಅವಕಾಶ ನೀಡಬಾರದು, ಇದರಲ್ಲಿ ಸರಕಾರದ ಜವಾಬ್ದಾರಿ ಕೂಡ ಇದೆ. ನಿಜವಾದ ಪ್ರಜೆಗೆ ನೀಡಬೇಕು. ಇದನ್ನು ಕ್ರಾಂತಿಕಾರಿಯಾಗಿ ತೆಗೆದುಕೊಳ್ಳಬೇಕು, ಪ್ರಜೆಗಳು ವಂಚಿತರಾದರೆ ಪರಿಷ್ಕರಣೆಯ ಅರ್ಥ ಏನೆಂದು ಪ್ರಶ್ನಿಸಿದರಲ್ಲದೆ, ಚುನಾವಣಾ ತಂತ್ರದ ಮೇಲೆ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಪ್ರಕ್ರಿಯೆಯಲ್ಲಿ ಗೊಂದಲ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗೊಂದಲಗಳಿವೆ. ಈ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿರುವ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಅರ್ಜಿ ವಿತರಣೆ ಮಾಡುತ್ತಿದ್ದಾರೆ. ಆದರೆ ಅರ್ಜಿ ಭರ್ತಿ ಮಾಡುವ ಬಗ್ಗೆ ಹಾಗೂ ದಾಖಲೆಗಳನ್ನು ಒದಗಿಸುವಲ್ಲಿ ಜನರಲ್ಲಿ ಗೊಂದಲಗಳಿವೆ. ಹಾಗಾಗಿ ಕೆಲವು ಕಡೆಗಳಲ್ಲಿ ನುರಿತÀರಿಂದ ಅರ್ಜಿ ಭರ್ತಿ ಮಾಡಲು ಸಹಾಯ ಮಾಡಾಲಾಗುತ್ತಿದೆ. ಇದಕ್ಕೆ ವಿರೋಧ ಪಕ್ಷದವರು ವಿರೋಧ ಮಾಡುತ್ತಿರುವದೇಕೆ ಎಂದು ಧರ್ಮಜ ಪ್ರಶ್ನಿಸಿದರು. ಈ ಗೊಂದಲಗಳನ್ನು ಚುನಾವಣಾ ಆಯೋಗ ಮುತುವರ್ಜಿ ವಹಿಸಿ ಸರಿಪಡಿಸಬೇಕೆಂದು ಆಗ್ರಹಿಸಿದರು.

ಪಕ್ಷದ ಮಾಧ್ಯಮ ಸಂಹವನ ವಕ್ತಾರ ಟಿ.ಪಿ. ರಮೇಶ್ ಮಾತನಾಡಿ; ೨೦೦೨ರ ಮತದಾರರ ಪಟ್ಟಿ ಪಡೆಯಲು, ಹೆಸರು ಬದಲಾವಣೆ, ವರ್ಗಾವಣೆ, ತಿದ್ದುಪಡಿ, ಹೊಸ ಸೇರ್ಪಡೆ ಬಗ್ಗೆ ಗೊಂದಲ ಉಂಟಾಗಿದೆ. ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ, ಯಾರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಪ್ರತಿ ಪ್ರಜೆಗೂ ಹಕ್ಕು ಸಿಗುವಂತೆ ಪರಿಷ್ಕರಣೆ ಆಗಬೇಕೆಂದು ಆಗ್ರಹಿಸಿದರು.

ಬಿಎಲ್‌ಒ, ಬಿಎಲ್‌ಓಗಳಿಗೂ ಸರಿಯಾಗಿ ತರಬೇತಿ ಆಗಿಲ್ಲ, ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಗಮನ ಹರಿಸಿ ಕೆಲಸ ಮಾಡಬೇಕು. ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ವಿವರಣೆ ತಪ್ಪಾಗಿದ್ದರೆ ಆ್ಯಪ್‌ನಲ್ಲಿ ಸರಿಯಾಗುವದಿಲ್ಲ. ಮೊದಲು ತಾಂತ್ರಿಕ ಗೊಂದಲ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಯಾರ ಹೆಸರು ಕೂಡ ಬಿಟ್ಟು ಹೋಗಬಾರದೆಂಬ ಉದ್ದೇಶದಿಂದ ಶಾಶ್ವತ ನಿವಾಸಿಗಳಿಗೆ ಪ್ರಮಾಣ ಪತ್ರ ನೀಡುವದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು; ಇದನ್ನು ವಲಸಿಗರನ್ನು ಪಟ್ಟಿಗೆ ಸೇರಿಸುವ ಪ್ರಯತ್ನ ಎಂದು ವಿಪಕ್ಷದವರು ಆರೋಪಿಸುತ್ತಿದ್ದಾರೆ. ಭಾರತದ ನಿವಾಸಿಯಾಗಿದ್ದು, ಗುಡಿಸಲು ವಾಸಿಗಳು, ಬುಡಕಟ್ಟು ಜನಾಂಗದವರಲ್ಲಿ ದಾಖಲೆಗಳಿರುವದಿಲ್ಲ. ಅಂತಹವರಿಗೆ ವಾಸ ಪ್ರಮಾಣ ಪತ್ರ ನೀಡಲೇಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ವಾರ್‌ರೂಂ ಅಧ್ಯಕ್ಷ ತೆನ್ನೀರ ಮೈನಾ ಮಾತನಾಡಿ; ೨೦೦೨ರ ಮತದಾರರ ಪಟ್ಟಿಯಲ್ಲಿ ಆದಿವಾಸಿಗಳ ಹೆಸರು ಇಲ್ಲವಾಗಿದೆ. ಅಂತಹವರುಗಳಿಗೆ ವಾಸ ಪ್ರಮಾಣ ಪತ್ರ ನೀಡಲೇಬೇಕಿದೆ. ಇಲ್ಲವಾದರೆ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಅಲ್ಲದೆ ಆಯೋಗ ಕೇಳಿರುವ ಮೂರು ಅಂಶದ ಮಾಹಿತಿಯಲ್ಲಿ ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ಈ ವಾಸ ಪ್ರಮಾಣ ಪತ್ರ ಲಗತ್ತಿಸಿ ಮತದಾನದ ಹಕ್ಕು ಪಡೆಯಬಹುದಾಗಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಬ್ಲಾಕ್ ಅಧ್ಯಕ್ಷ ಹಂಸ, ಸಾಮಾಜಿಕ ಜಾಲತಾಣ ಪ್ರಮುಖ ಸೂರಜ್ ಹೊಸೂರು ಇದ್ದರು.