ಮಡಿಕೇರಿ, ಜು. ೧೧ : ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ೨೭ನೇ ವರ್ಷದಲ್ಲಿ ಅಜ್ಜಿಕುಟ್ಟಿರ ಕುಟುಂಬ ಆಯೋಜನೆ ಮಾಡಲಿದ್ದು, ಈಗಾಗಲೇ ಧ್ವಜ ಹಸ್ತಾಂತರ ಪ್ರಕ್ರಿಯೆ ಚೇನಂಡ ಕಪ್ ಹಾಕಿ ಫೈನಲ್ ಸಂದರ್ಭ ನಡೆದಿತ್ತು.

ಇದೀಗ ಕೊಡವ ಹಾಕಿ ಅಕಾಡೆಮಿಯ ಮೂಲಕ ಅಧಿಕೃತವಾದ ಹಕ್ಕು ಹಸ್ತಾಂತರ ಕಾರ್ಯ ಇಂದು ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು. ಕೊಡವ ಹಾಕಿ ಅಕಾಡೆಮಿ ಇದೇ ಪ್ರಥಮ ಬಾರಿಗೆ ಹಕ್ಕು ಹಸ್ತಾಂತರ ಕಾರ್ಯವನ್ನು ಹಮ್ಮಿಕೊಂಡಿತ್ತು.

ಈಗಾಗಲೇ ಅಜ್ಜಿಕುಟ್ಟಿರ ಕುಟುಂಬದವರು ಉತ್ಸವ ಆಯೋಜನೆಯ ಪೂರ್ವ ತಯಾರಿಯನ್ನು ನಡೆಸುತ್ತಿದ್ದಾರೆ. ಉತ್ಸವ ಸಮಿತಿಯನ್ನೂ ರಚಿಸಲಾಗಿದೆ. ಇಂದು ಪಾಡಿ ಸನ್ನಿಧಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಅವರು ಅಜ್ಜಿಕುಟ್ಟಿರ ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾದ ನರೇನ್ ಕಾರ್ಯಪ್ಪ, ಗೌರವಾಧ್ಯಕ್ಷರೂ ಆಗಿರುವ ಈ ಕುಟುಂಬದವರೇ ಆದ ಶಾಸಕ ಎ.ಎಸ್. ಪೊನ್ನಣ್ಣ ಮತ್ತಿತರ ಪ್ರಮುಖರಿಗೆ ಹಸ್ತಾಂತರಿಸಿದರು. ಶ್ರೀ ಪಾಡಿ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಮೊದಲಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆಯೋಜಕ ಹಕ್ಕು ಪತ್ರವನ್ನು ಕೊಡವ ಹಾಕಿ ಅಕಾಡೆಮಿ ವತಿಯಿಂದ ಅಜ್ಜಿಕುಟ್ಟಿರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಧ್ಯಕ್ಷರಾದ ಚೆಪ್ಪುಡಿರ ಪೂಣಚ್ಚ, ಕಾರ್ಯದರ್ಶಿ ಕುಲ್ಲೇಟಿರ ಬೇಬ, ನಿರ್ದೇಶಕರಾದ ಕಲಿಯಂಡ ಸಂಪನ್ ಅಯ್ಯಪ್ಪ, ಮುದ್ದಂಡ ರಿಷಿನ್ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಅಜ್ಜಿಕುಟ್ಟಿರ ಕುಟುಂಬದ ಸಜನ್, ಕಾರ್ಯದರ್ಶಿ ಪೂಣಚ್ಚ, ಸದಸ್ಯರಾದ ಗಿರೀಶ್, ಪೊನ್ನಪ್ಪ, ಪ್ರಖ್ಯಾತ್, ಮಧು, ಸುರೇಂದ್ರ, ಹ್ಯಾರಿ, ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಬಾಚÀಮಂಡ ರಾಜ, ಲವ ಚಿಣ್ಣಪ್ಪ, ಬೋಳಂಡ ಗಿರೀಶ್, ಕೋಡಿರ ವಿನೋದ್ ನಾಣಯ್ಯ, ಐತ್ತಿಚಂಡ ಪ್ರಕಾಶ್, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.