ಸಿದ್ದಾಪುರ, ಜು. ೯: ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಮೂರ್ನಾಡು ಸಮೀಪದ ಐಕೊಳ ಗ್ರಾಮದಲ್ಲಿ ಸಂಭವಿಸಿದೆ.

ಹಾಲುಗುAದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡAಗೇರಿ ನಿವಾಸಿ ಆಲಿ (೬೦) ಎಂಬವರು ಕೆಲಸದ ನಿಮಿತ್ತ ಮೂರ್ನಾಡಿಗೆ ತೆರಳಿ ತಮ್ಮ ಮಾರುತಿ ಓಮ್ನಿ ವ್ಯಾನ್‌ನಲ್ಲಿ ಒಬ್ಬರೇ ಕೊಂಡAಗೇರಿಗೆ ಬರುತ್ತಿದ್ದ ಸಂದರ್ಭ ಐಕೊಳ ಗ್ರಾಮದ ಬಳಿ ರಸ್ತೆ ಬದಿಯಿಂದ ಗಾಳಿ ಮಳೆಗೆ ಸಿಲುಕಿ, ಹಠಾತ್ತನೆ ಮರ ಕಾರಿನ ಮೇಲೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ಆಲಿ ಅವರಿಗೆ ತಲೆ, ಕಾಲಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯರು ಮರವನ್ನು ತೆರವುಗೊಳಿಸಿ, ಗಾಯಾಳು ಆಲಿ ಅವರನ್ನು ತಕ್ಷಣವೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು.

ಕಾರು ಸಂಪೂರ್ಣ ಜಖಂಗೊAಡಿದೆ. ಅದೃಷ್ಟವಶಾತ್ ಆಲಿ ರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ಮಡಿಕೇರಿ ತಾಲೂಕು ತಹಶೀಲ್ದಾರ್ ಶ್ರೀಧರ್, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಮೂರ್ನಾಡು ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ದಿನೇಶ್, ಕಂದಾಯ ಇಲಾಖೆ ಅಧಿಕಾರಿಗಳು, ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹೀಮ್ ಅಂದಾಯಿ, ಇನ್ನಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.