ಮಡಿಕೇರಿ, ಜು. ೮: ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಸಂಸ್ಥೆ ವತಿಯಿಂದ ಮೈಸೂರಿನ ಯುವರಾಜ ಕಾಲೇಜು ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ
ನಡೆದ ೧೯ನೇ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಸೋಮವಾರಪೇಟೆಯ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮಿಥೇಶ್ ಜೆ. ಹಾಗೂ ರಿತನ್ ಡಿ.ಎಸ್. ಬೆಳ್ಳಿಯ ಪದಕ ಗೆದ್ದಿದ್ದಾರೆ.
ಕಿಕ್ ಬಾಕ್ಸಿಂಗ್ ತರಬೇತುದಾರ ಸುದರ್ಶನ್ ಎನ್.ಸಿ. ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮೈಸೂರಿನ ಜಿ.ಕೆ. ವಿನ್ಯಾಸ ಯೋಗ ಕೇಂದ್ರ ಮತ್ತು ಶ್ರೀ ಕೃಷ್ಣ ಯೋಗಾಸ್ ಸಂಸ್ಥೆ ವತಿಯಿಂದ ನಡೆದ ಯೋಗ ಸ್ಪರ್ಧೆಯಲ್ಲೂ ಮಿಥೇಶ್ ಜೆ. ಹಾಗೂ ರಿತನ್ ಡಿ.ಎಸ್. ಪಾಲ್ಗೊಂಡು ಪದಕ ಮತ್ತು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.