ಗುಡ್ಡೆಹೊಸೂರು, ಜು. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಡ್ಡೆಹೊಸೂರು ವಲಯದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿಯಲ್ಲಿ ವಲಯ ವ್ಯಾಪ್ತಿಯ ಒಟ್ಟು ೯ ಒಕ್ಕೂಟಗಳ ಪದಾಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ಕ್ಷೇತ್ರದ ಹಿನ್ನೆಲೆ ಹಾಗೂ ಪದಾಧಿಕಾರಿಗಳು ತಮಗೆ ದೊರೆತಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು.
ತಾಲೂಕು ಯೋಜನಾಧಿಕಾರಿಗಳು ಪದಾಧಿಕಾರಿಗಳ ನಾಯಕತ್ವ ಗುಣಗಳ ಕುರಿತು ಕಲ್ಲವ್ವ, ಮಣ್ಣವ್ವ, ಸಂಜವ್ವ ಹಾಗೂ ಸಕ್ಕರವ್ವ ಮಾಹಿತಿ ನೀಡಿದರು.
ಕುಶಾಲನಗರ ಮೇಲ್ವಿಚಾರಕ ಸುಧೀರ್ ಅವರು ಒಕ್ಕೂಟ ಸಭೆ ನಡೆಸುವ ವಿಧಾನ ಹಾಗೂ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು. ಲೆಕ್ಕಪರಿಶೋಧಕಿ ರೂಪ ಅವರು ಬಡ್ಡಿ ವ್ಯವಹಾರದ ಕುರಿತು, ಕೃಷಿ ಅಧಿಕಾರಿ ಸ್ವಾಮಿ ಅವರು ಭತ್ತ ನಾಟಿ ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆಯ ಕುರಿತು ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕರ ನೇತೃತ್ವದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಸೇವಾ ಪ್ರತಿನಿಧಿ ರೋಹಿಣಿ ಸ್ವಾಗತಿಸಿ, ಸುಧಾ ಹಾಗೂ ನಿರ್ಮಲ ವಂದಿಸಿದರು.