ಚೆಯ್ಯಂಡಾಣೆ, ಜು. ೮: ಕೊಡಗು ಪತ್ರಕರ್ತ ಸಂಘದಿAದ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಸ್ವೀಕರಿಸಿದ ಪತ್ರಕರ್ತ ‘ಶಕ್ತಿ’ ವರದಿಗಾರ ಅಶ್ರಫ್ ಅವರನ್ನು ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಬಾಲಕೃಷ್ಣ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ, ನಿಕಟಪೂರ್ವ ಅಧ್ಯಕ್ಷರುಗಳಾದ ಬಿದ್ದಂಡ ರಾಜೇಶ್ ಅಚ್ಚಯ್ಯ, ಪೆಮ್ಮಂಡ ಕೌಶಿ ಕಾವೇರಮ್ಮ, ಮಾಜಿ ಸದಸ್ಯರುಗಳಾದ ಪ್ರವೀಣ್ ಈರಪ್ಪ, ಬೇಪಡಿಯಂಡ ವಿಲಿನ್, ಸುಬೈರ್ ಸಿ.ಇ. ಮಮ್ಮದ್, ಬಿ.ಆರ್. ಪುಷ್ಪ, ನಂಬಿಯಪAಡ ವಾಣಿ, ಕವಿತಾ ಪ್ರಕಾಶ್, ಗ್ರಾ.ಪಂ ಸಿಬ್ಬಂದಿಗಳಾದ ಪಮಿಕ, ದಿನೇಶ್ ಕುಮಾರ್, ಮೊಣ್ಣಪ್ಪ, ಸಲಾಂ, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.