ಸಿದ್ದಾಪುರ, ಜು. ೮: ಮೈಸೂರು ದಸರಾ ಅಂಬಾರಿ ಹೊರುವ ಖ್ಯಾತ ಸಾಕಾನೆ ಅಭಿಮನ್ಯುನನ್ನು ಕಟ್ಟಿಹಾಕಿದ್ದ ವೇಳೆ ಮರಕ್ಕೆ ದಂತ ಗುದ್ದಿದ ಪರಿಣಾಮ ಎಡಭಾಗದ ದಂತದ ತುದಿ ಮುರಿದಿರುವ ಘಟನೆ ಬೆಳಕಿಗೆ ಬಂದಿದೆ.
ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಎಂದಿನAತೆ ಅಭಿಮನ್ಯುವನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು. ಈ ವೇಳೆ ಆನೆ ದಂತದಿAದ ಮರಕ್ಕೆ ಗುದ್ದಿದ ಪರಿಣಾಮ ಎಡಭಾಗದ ದಂತದ ತುದಿ ಭಾಗ ಮುರಿದಿದೆ. ಆದರೆ, ಈ ಘಟನೆಯಿಂದ ಆನೆಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಭಿಮನ್ಯು ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಮುಖವಾಗಿ ನೆರವಾಗುತ್ತಿರುವ ಅನುಭವಿ ಸಾಕಾನೆಯಾಗಿದೆ. ಕಾಡಾನೆಗಳನ್ನು ನಿಯಂತ್ರಿಸುವುದು, ಸೆರೆ ಹಿಡಿಯುವುದು ಹಾಗೂ ಲಾರಿಗೆ ಹತ್ತಿಸಿ ಸಾಗಿಸುವ ಕಾರ್ಯಗಳಲ್ಲಿ ಈ ಆನೆ ಮಹತ್ವದ ಪಾತ್ರ ವಹಿಸಿದೆ. ಇತ್ತೀಚೆಗೆ ಆನಗೋಡು ಪ್ರದೇಶದಲ್ಲಿ ನಡೆದ ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು, ಕಾರ್ಯಾಚರಣೆ ಪೂರ್ಣಗೊಳಿಸಿ ಮರಳಿ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಆಗಮಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.