ಮೂರ್ನಾಡು, ಜು. ೭: ಇಲ್ಲಿನ ಲಯನ್ಸ್ ಕ್ಲಬ್‌ನ ೨೦೨೬-೨೭ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ಪದಗ್ರಹಣ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಮುಲ್ಲೆರ ಪಾಪ ಕಾವೇರಿಯಪ್ಪ, ಕಾರ್ಯದರ್ಶಿಯಾಗಿ ಪಳಂಗAಡ ಪ್ರಕಾಶ್ ಕಾವೇರಿಯಪ್ಪ, ಖಜಾಂಚಿಯಾಗಿ ಬಡುವಂಡ ಅರುಣ್ ಅಪ್ಪಚ್ಚು ಅಧಿಕಾರ ಸ್ವೀಕರಿಸಿದರು.

ಲಯನ್ ಪ್ರಾಂತೀಯ ಅಧ್ಯಕ್ಷ ಡಾ ಪಂಚಮ್ ತಿಮ್ಮಯ್ಯ ವಲಯ ಅಧ್ಯಕ್ಷ ಬಡುವಂಡ ಬಿಂದು ಗಣಪತಿ ಹಾಗೂ ಇತರರು ಭಾಗವಹಿಸಿದ್ದರು. ಲಯನ್ ಅಮ್ಮಾಟಂಡ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.