ಚೆಯ್ಯಂಡಾಣೆ, ಜು. ೭: ಪಾಲಿಬೆಟ್ಟ ಮೊಯ್ಯದ್ದೀನ್ ಸುನ್ನಿ ಜುಮಾ ಮಸೀದಿ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಪಾಲಿಬೆಟ್ಟ ಮದರಸ ಸಭಾಂಗಣದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಮಹಲ್ ಖತೀಬ್ ಮಹಮ್ಮದ್ ರಾಫಿ ಹಿಮಮಿ ಕಾಮಿಲ್ ಸಖಾಫಿ ಉದ್ಘಾಟಿಸಿ ಮಾತನಾಡಿದರು.
ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಮುನ್ನ ಸಭೆಯಲ್ಲಿ ಮಂಡಿಸಿದರು.
ನAತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷರಾಗಿ ಝೈನುದ್ದೀನ್, ಕೋಶಾಧಿಕಾರಿಯಾಗಿ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಮುನ್ನ,ಜೊತೆ ಕಾರ್ಯದರ್ಶಿಯಾಗಿ ಶಮೀರ್, ನವಾಸ್ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಫಸಲ್ ರಹ್ಮಾನ್, ರೌಫ್, ರಫೀಕ್ ಸಅದಿ,ಮುನೀರ್ ತಾರಿಕಟ್ಟೆ, ಅಲಿಅಕ್ಬರ್, ಜಾವಿದ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಮುನ್ನ ಸ್ವಾಗತಿಸಿ, ಶಮೀರ್ ವಂದಿಸಿದರು.