ಮಡಿಕೇರಿ, ಜು. ೬ : ಮಡಿಕೇರಿ ಮಲ್ಲಿಕಾರ್ಜುನ ನಗರದ ನಿವಾಸಿ ಹೆಚ್. ಮಂಜುನಾಥ್ (೪೫) ಇಂದು ಹೃದಯಾಘಾತದಿಂದ ನಿಧನರಾದರು.ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದರು.

ಮಂಜುನಾಥ್ ಕೋದಂಡರಾಮ ದೇವಾಲಯ ಟ್ರಸ್ಟ್ನ ಮಾಜಿ ಅಧ್ಯಕ್ಷರು, ದಸರಾ ದಶಮಂಟಪ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ರಾಮೋತ್ಸವ ಸಮಿತಿಯ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಂಜುನಾಥ್ ನಿಧನಕ್ಕೆ ಕೋದಂಡರಾಮ ಟ್ರಸ್ಟ್ನ ಅಧ್ಯಕ್ಷ ಹೆಚ್.ಎನ್. ನಂಜುAಡ, ಸಲಹೆಗಾರರಾದ ಜಿ. ರಾಜೇಂದ್ರ ಮತ್ತು ಸದಸ್ಯರು ಹಾಗೂ ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಮತ್ತು ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.