ಮಡಿಕೇರಿ, ಜು. ೬: ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸಬ್ - ಜೂನಿಯರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ನೈರಾ ಬೋಪಣ್ಣ ಭಾಗವಹಿಸಿ ಸಾಧನೆ ಗೈದಿದ್ದಾರೆ.
ಬಾಲಕಿಯರ ೧೩ ವರ್ಷ ವಿಭಾಗದಲ್ಲಿ ಭಾಗವಹಿಸಿದ ನೈರಾ, ೪೦೦ ಮೀಟರ್ ಫ್ರೀಸ್ಟೆöÊಲ್ ವಿಭಾಗದಲ್ಲಿ ೪ ನಿಮಿಷ ೪೭.೪೧ ಸೆಕೆಂಡ್, ೨೦೦ ಮೀಟರ್ ಬ್ಯಾಕ್ ಸ್ಟೊçÃಕ್‌ನಲ್ಲಿ ೨ ನಿಮಿಷ ೩೪.೩೪ ಸೆಕೆಂಡ್ ಹಾಗೂ ೧೦೦ ಮೀಟರ್ ಫ್ರೀಸ್ಟೆöÊಲ್‌ನಲ್ಲಿ ೧ ನಿಮಿಷ ೩.೬೩ ಸೆಕೆಂಡ್‌ನಲ್ಲಿ ಪೂರೈಸಿ ಮೂರರಲ್ಲಿಯೂ ಚಿನ್ನದ ಪದಕ ಗಳಿಸಿದ್ದಾರೆ.
ಇದಲ್ಲದೆ ೪x೧೦೦ ಮೆಡ್ಲಿ ರಿಲೇ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ನೈರಾ ಅವರು ಸ್ವಿಮ್ ಲೈಫ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಬೆಂಗಳೂರಿನ ವಿದ್ಯಾಶಿಲ್ಪ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೂಲತಃ ಕುಟ್ಟ ಗ್ರಾಮದ ಕಾಳೇಂಗಡ ಬೋಪಣ್ಣ - ನಿರಳ ಬೋಪಣ್ಣ ದಂಪತಿಯ ಪುತ್ರಿ.