ಮಡಿಕೇರಿ, ಜು.೬: ‘ಸಹಕಾರದ ಬಗ್ಗೆ ಅರಿವು’ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಸರಕಾರಿ ಪದವಿಪೂರ್ವ ಕಾಲೇಜು, ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪಿ.ಯು. ರಾಬಿನ್ ದೇವಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಎಂಬುದು ಕೇವಲ ಒಂದು ಸಂಸ್ಥೆಯಲ್ಲ, ಅದು ವಿಶ್ವಾಸ, ಪಾರದರ್ಶಕತೆ, ಸ್ವಾವಲಂಬನೆ ಮತ್ತು ಸಮೂಹ ಅಭಿವೃದ್ಧಿಯ ಚಳವಳಿಯಾಗಿದೆ. ಸಹಕಾರದಿಂದ ಸಮೃದ್ಧಿ ಎಂಬುದು ಕೇವಲ ಘೋಷಣೆಯಲ್ಲ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿಯನ್ನು ತರುವ ರಾಷ್ಟಿçÃಯ ಸಂಕಲ್ಪವಾಗಿದೆ ಎಂದರು.

ಈಗಾಗಲೇ ರೈತರ ಸಮಾವೇಶ, ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಿದ್ದು ಆರೋಗ್ಯ ತಪಾಸಣೆ, ಸ್ವಚ್ಚತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಅಲ್ಲದೆ ಅನಾಥ ಮಕ್ಕಳಿಗೆ ಕೊಡುಗೆ ನೀಡುವ ಕಾರ್ಯಕ್ರಮವನ್ನು ಸಹ ಏರ್ಪಡಿಸಲು ಉದ್ದೇಶಿಸಿರುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು, ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲಿ ಭಾಗವಹಿಸುವುದು ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರಬೇಕು. ಬಾಹ್ಯ ಪ್ರಪಂಚದ ಅರಿವು ಪಡೆಯಬೇಕು. ಆಗ ಮಾತ್ರವೇ ಅವರ ಅಂತರಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಕೆ.ಐ.ಸಿ.ಎಂ.ನ ಉಪನ್ಯಾಸಕರಾದ ಮಹದೇಪ್ಪ ಅವರು ‘ಸಹಕಾರ’ದ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿದೇಶಕರಾದ ಎಂ.ಎA. ಶ್ಯಾಮಲಾ, ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್, ಮಡಿಕೇರಿ ಕೆ.ಐ.ಸಿ.ಎಂ.ನ ಉಪನ್ಯಾಸಕರಾದ ಸಂಜೀವ್, ಸಹಕಾರ ಇಲಾಖೆಯ ಸಂದೀಪ್, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ವ್ಯವಸ್ಥಾಪಕಿ ಆರ್. ಮಂಜುಳ ಉಪಸ್ಥಿತರಿದ್ದರು.