ಮಡಿಕೇರಿ, ಜು.೬: ವಿದ್ಯಾ ದೇಗುಲಗಳಲ್ಲಿ ಮಕ್ಕಳನ್ನು ಜ್ಞಾನವಂತರಾಗಿ ಮಾಡುವ ಶಾಲೆಗಳನ್ನು ನಿಯಂತ್ರಿಸುವ ಕ್ಷೇತ್ರ ಶಿಕ್ಷಣ ಇಲಾಖಾ ಕಚೇರಿಯೇ ಕಾಡು ಪಾಲಾದಂತೆ ಕಂಡು ಬರುತ್ತಿದೆ.

ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷÀಣ ಇಲಾಖಾ (ಬಿಇಒ) ಕಚೇರಿಯ ಸುತ್ತ ಕಾಡು ಬೆಳೆದಿದೆ. ದೂರದಿಂದ ನೋಡುವಾಗ ಅಲ್ಲಿ ಕಚೇರಿ ಇರುವುದೇ ಸ್ಪಷ್ಟ ಗೋಚರವಾಗುತ್ತಿಲ್ಲ. ಈ ಹಿಂದೆ ಡಿಡಿಪಿಐ ಕಚೇರಿಯಿದ್ದುದು ಜೂನಿಯರ್ ಕಾಲೇಜು ಆವರಣಕ್ಕೆ ಸ್ಥಳಾಂತರಗೊAಡಿತು. ಈ ಹಿಂದೆ ಇದ್ದ ತಾಲೂಕು ತಹಶೀಲ್ದಾರ್ ಕಚೇರಿ ಕಟ್ಟಡಕ್ಕೆ ಹೊಂದಿಕೊAಡAತಿರುವ ಬಿಇಒ ಕಚೇರಿ ಕಣ್ಣಿಗೇ ಕಾಣದಷ್ಟು ಅದರ ಸುತ್ತ ಕಾಡು ಬೆಳೆÀದಿದ್ದರೂ ಸಂಬAಧಿಸಿಸದ ಅಧಿಕಾರಿಗಳು ಕಂಡರೂ ಕಾಣದಂತೆ ನಿರ್ಲಕ್ಷö್ಯ ವಹಿಸಿರುವುದು ಆಶ್ಚರ್ಯಕರ. ಸುತ್ತÀಲೂ ಬೆಳೆದ ಕಾಡನ್ನು, ಕಳೆಯನ್ನು ತೆಗೆಸುವಷ್ಟೂ ವ್ಯವಧಾನವಿಲ್ಲದಿರುವದು ದಿವ್ಯ ನಿರ್ಲಕ್ಷö್ಯಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿ- ಸಿಬ್ಬಂದಿ ಮುತುವರ್ಜಿ ವಹಿಸಲಿ.

ಇನ್ನೊಂದೆಡೆ ಕೋಟೆ ಆವರಣಕ್ಕೆ ಕೆಳ ರಸ್ತೆಯಿಂದ ಹತ್ತುವ ಜಾಗದಲ್ಲಿ ರಸ್ತೆಯೇ ಕುಸಿದಿದೆ. ಈ ಬಗ್ಗೆ ಯಾರೂ ಗಮನಿಸಿದಂತಿಲ್ಲ್ಲ. ನಗರ ಸಭೆ ಇತ್ತ ಚಿತ್ತÀ ಹರಿಸಲಿ .

- ಟಿ.ಜಿ. ಸತೀಶ್