ಬಾಳೆಲೆ, ಜು. ೬: ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ರೈತ ಮತ್ತು ರೈತ ಮಹಿಳೆಯರಿಗೆ ಆರ್ಕಿಡ್ ಮತ್ತು ಅಣಬೆ ಬೆಳೆಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಚಾಲನೆ ನೀಡಿದರು.
ಆರ್ಕಿಡ್ ಹೂವಿನ ಗಿಡಗಳ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಜಡೇಗೌಡ ಮಾಹಿತಿ ನೀಡಿ, ಕೊಡಗು ಆರ್ಕಿಡ್ ಹೂವಿನ ಬೆಳೆಗೆ ಸಮೃದ್ಧವಾದ ಪರಿಸರವನ್ನು ಹೊಂದಿದ್ದು, ೧೨೦ಕ್ಕೂ ಹೆಚ್ಚು ತಳಿಗಳು ಕೊಡಗಿನಲ್ಲಿವೆ. ಬ್ರಹ್ಮಗಿರಿ ಮತ್ತು ಪುಷ್ಪಗಿರಿಧಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕೊಡಗಿನ ಮನೆಯಂಗಳದಲ್ಲಿ ಇದನ್ನು ಬೆಳೆಯುವುದರ ಮೂಲಕ ಮಾರಾಟ ಮಾಡಲು ಸಹ ಅವಕಾಶಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಣಬೆ ಕೃಷಿ ತಜ್ಞರಾದ ಅಂಬಿಕಾ ಅಣಬೆ ಕೃಷಿ ಮತ್ತು ಅದಕ್ಕಿರುವ ಮಾರುಕಟ್ಟೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿಯಿತ್ತರು. ಕೂಡಿಗೆ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಶಿವಮೂರ್ತಿ ಮಾತನಾಡಿ, ಕೃಷಿಯನ್ನು ವಾಣಿಜ್ಯ ವ್ಯವಸ್ಥೆಗೆ ಪರಿವರ್ತಿಸಿಕೊಂಡರೆ ಗ್ರಾಮಾಂತರ ಭಾಗದ ರೈತಾಪಿ ವರ್ಗಕ್ಕೆ ಆದಾಯ ತಂದುಕೊಡುವ ಮಾರ್ಗವಾಗಿ ಮಾರ್ಪಾಡು ಮಾಡಿಕೊಳ್ಳ್ಳುವುದರ ಜೊತೆಗೆ ಸರ್ಕಾರದ ಸಹಾಯ ಧನವನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬಹುದೆಂದು ಕರೆ ನೀಡಿದರು.
ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾ ಜ್ಯೋತಿ, ಕೃಷಿ ಇಲಾಖಾಧಿಕಾರಿ ಮೀರಾ, ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರತಿಭಾ ಉತ್ತಪ್ಪ, ಮುಖ್ಯ ಶಿಕ್ಷಕ ಚಂದ್ರಶೇಖರ್ ಕೆ., ಪ್ರಮುಖರಾದ ಅಡ್ಡಂಗಡ ಪೊನ್ನಮ್ಮ, ಚಂದ್ರಾವತಿ ಸೇರಿದಂತೆ ರೈತರು, ರೈತ ಮಹಿಳೆಯರು ಹಾಜರಿದ್ದರು. ವಿಜಯಲಕ್ಷಿö್ಮ ಪ್ರೌಢಶಾಲಾ ಶಿಕ್ಷಕ ರಾಘವೇಂದ್ರ ಸ್ವಾಗತಿಸಿ, ನಿರೂಪಿಸಿದರು.