ಸುಂಟಿಕೊಪ್ಪ, ಜು. ೩: ಸಮೀಪದ ನಾಕೂರು ಕಾನ್ಬೈಲ್ನ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಕಾನ್ಬೈಲ್ ಸರ್ಕಾರಿ ಶಾಲೆಯ ಆವರಣ ಹಾಗೂ ಸುತ್ತಮುತ್ತ ಬೆಳೆದಿದ್ದ ಕಾಡು ಗಿಡಗಂಟಿಗಳನ್ನು ತೆರವುಗೊಳಿಸಿ ಶ್ರಮದಾನ ನಡೆಸಲಾಯಿತು.
ಶಾಲಾ ಆವರಣವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಉದ್ದೇಶದಿಂದ ಕ್ಲಬ್ ಸದಸ್ಯರು ಸ್ವಯಂಪ್ರೇರಿತವಾಗಿ ಶ್ರಮದಾನದಲ್ಲಿ ಪಾಲ್ಗೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಸಂದರ್ಭ ಕ್ಲಬ್ ಅಧ್ಯಕ್ಷ ಶಂಕರನಾರಾಯಣ, ಉಪಾಧ್ಯಕ್ಷ ಧರ್ಮ, ಗೌರವಾಧ್ಯಕ್ಷ ವಸಂತ, ಮಾಜಿ ಅಧ್ಯಕ್ಷ ಪೌಲೋಸ್, ಕಾರ್ಯದರ್ಶಿ ಪ್ರಶಾಂತ್ ಹಾಗೂ ಸದಸ್ಯರಾದ ಚಂದ್ರ, ಅನಿಲ್, ದಿನೇಶ್, ದಯಾನಂದ ರೈ, ದಿವಾಕರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.