ಶನಿವಾರಸಂತೆ, ಜು. ೩ : ಪಟ್ಟಣದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯಲ್ಲಿ ಸರ್ಕಾರದ ಮಹತ್ವದ ಕಾರ್ಯಕ್ರಮವಾದ ಬ್ಯಾಗ್ ಲೆಸ್ ಡೇ ಅಂಗವಾಗಿ ಸನ್ನಿಧಿ ವಿಶೇಷಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಸಂವಾದ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ವಿಶೇಷಚೇತನ ಮಕ್ಕಳಾದ ಕುಮಾರಿ, ಪ್ರಾರ್ಥನಾ, ಕನಕ, ಶಫೀಕ್, ಧನುಷ್ ಹಾಗೂ ಸಮೀರ್ ನೃತ್ಯ ಮಾಡಿ ರಂಜಿಸಿದರು. ಸಂವಾದ ಕಾರ್ಯಕ್ರಮದಲ್ಲೂ ಉತ್ಸಾಹದಿಂದ ಪಾಲ್ಗೊಂಡರು. ಕಿರುತೆರೆಯ ಡಿಕೆಡಿ ಕಲಾವಿದ ಸಮೀರ್ ನೃತ್ಯ ಪ್ರದರ್ಶನ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮನರಂಜಿಸಿದರು.

ವಿಶೇಷಚೇತನ ಮಕ್ಕಳ ಶಾಲೆಯ ಶಿಕ್ಷಕಿಯರಾದ ಕುಮಾರಿ, ಕಾವ್ಯಾ, ಭಾಗ್ಯಜ್ಯೋತಿಯವರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಮಹಮ್ಮದ್ ಜಹೀರ್ ಹಾಗೂ ಮುಖ್ಯಶಿಕ್ಷಕಿ ಸುಚಿತ್ರಾ ಸನ್ಮಾನಿಸಿ ಗೌರವಿಸಿದರು. ಪ್ರೌಢಶಾಲಾ ಶಿಕ್ಷಕರಾದ ಕೆ.ಪಿ. ಜಯಕುಮಾರ್, ಸಂದೇಶ್, ಅಂಜನಪ್ಪ, ಸವಿತಾ, ಶ್ರೀಕಲಾ, ಪ್ರಮೋದ್, ಕಾಲೇಜು ಉಪನ್ಯಾಸಕರಾದ ಸರ್ಫ್ರಾಜ್ ಅಹಮ್ಮದ್, ತೀರ್ಥಾನಂದ್, ಭವ್ಯ ಹಾಜರಿದ್ದರು.