ನಾಪೋಕ್ಲು, ಜು. ೪: ಹುಣ್ಣಿಮೆಯ ಅಂಗವಾಗಿ ನಾಪೋಕ್ಲು ಶೌರ್ಯ ತಂಡದ ಸದಸ್ಯರಿಂದ ಜೀವ ನದಿ ಕಾವೇರಿಗೆ ಆರತಿ ಬೆಳಗಲಾಯಿತು.
ಇಲ್ಲಿಯ ಕೊಟ್ಟಮುಡಿ ಸೇತುವೆಯ ಕೆಳಗೆ ಕಾವೇರಿ ನದಿಯಲ್ಲಿ ಆರತಿ ಬೆಳಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಭಾಗಮಂಡಲ ವಲಯದ ಮೇಲ್ವಿಚಾರಕ ಸಂತೋಷ್ ಭಾಗವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ತಂಡದ ಸದಸ್ಯರಾದ ಉಮಾಲಕ್ಷಿö್ಮ, ಶಂಕರ, ದಿಲಿಶ್, ಸುರೇಶ್, ವಿಕಾಸ್, ರಮ್ಯ, ಮಾಯಿಲಪ್ಪ, ಕೃಷ್ಣ, ರಶ್ಮಿ ಪಾಲ್ಗೊಂಡಿದ್ದರು.