ಸೋಮವಾರಪೇಟೆ, ಜು. ೪: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ೨೦೨೬-೨೭ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತಾ. ೬ರಂದು ಪಟ್ಟಣದ ಸಾಕ್ಷಿ ಕನ್ವೆನ್ಷನ್ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ನಡೆಯಲಿದೆ. ಇನ್ನರ್ ವೀಲ್ನ ಜಾಹ್ನವಿ ಮೂರ್ತಿ ಪದಗ್ರಹಣ ನೆರವೇರಿಸಲಿರುವರು. ಅಧ್ಯಕ್ಷರಾಗಿ ಎ.ಲತಾ ಮಂಜು, ಕಾರ್ಯದರ್ಶಿಯಾಗಿ ವನಿತಾ ಜಯರಾಮ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧ್ಯಕ್ಷೆ ತನ್ಮಯಿ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.