ಮಡಿಕೇರಿ, ಜು. ೪ : ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ನ) ಆಶ್ರಯದಲ್ಲಿ ತುಮಕೂರಿನಲ್ಲಿ ಜುಲೈ ೭ರಿಂದ ೧೭ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಅಂತರ ಜಿಲ್ಲಾ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಕೆಡಿಎಫ್ಎ) ತನ್ನ ೧೮ ಸದಸ್ಯರ ತಂಡವನ್ನು ಶುಕ್ರವಾರ ಅಮ್ಮತ್ತಿ ಮೈದಾನದಲ್ಲಿ ಅಧಿಕೃತವಾಗಿ ಪ್ರಕಟಿಸಿತು. ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಕೊಡಗು ತಂಡ ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ.
ಈ ಪ್ರತಿಷ್ಠಿತ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಬಲಿಷ್ಠ ತಂಡಗಳು ಸೆಣಸಲಿದ್ದು, ಕೊಡಗು ತಂಡದ ನಾಯಕತ್ವವನ್ನು ವಿಜೇಶ್ ಕೆ.ಎಂ. ಅವರಿಗೆ ವಹಿಸಲಾಗಿದೆ. ಅನುಭವಿ ಹಾಗೂ ಯುವ ಆಟಗಾರರ ಸಮನ್ವಯದೊಂದಿಗೆ ತಂಡವನ್ನು ರೂಪಿಸಲಾಗಿದ್ದು, ಜಿಲ್ಲೆಯ ಫುಟ್ಬಾಲ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ.
ಆಯ್ಕೆಯಾದ ಆಟಗಾರರು: ತನ್ವೀರ್ ಪಿ.ಎ., ಮಣಿಕಂಠ ಆರ್. (ಗೋಲ್ಕೀಪರ್), ಈಶ್ವರ ಎಂ.ಡಿ., ಚಂಪಕ್ ಎಂ.ಎA., ಉಮ್ಮರುಲ್ ಫಾರೂಕ್ ಕೆ.ಎ., ಅಜಿತ್ , ಯಶವಂತ್ ಎಲ್. (ಗೋಲ್ಕೀಪರ್), ವಿಜೇಶ್ ಕೆ.ಎಂ. (ನಾಯಕ), ರಂಗಸ್ವಾಮಿ ಕೆ.ಆರ್., ದಿವಾಕರ ಎಚ್.ಎ., ಅಣ್ಣಪ್ಪ ವೈ.ಆರ್., ಮೊಹಮ್ಮದ್ ಮುಸ್ತಾಕ್ ಪಿ.ಎ., ಅಜಿತ್ಕುಮಾರ್ ಎಚ್.ಎಂ., ದೀಕ್ಷಿತ್ ಎಚ್.ಜಿ., ಪಿ.ಎನ್. ಮೊಹಮ್ಮದ್ ಸವಾದ್, ವಿಕ್ರಂ ಎಂ.ಎA., ಮುಹಮ್ಮದ್ ಆಶಿರ್ ಕೆ.ಎಚ್. ಹಾಗೂ ಸಬಿತ್ ಆಯ್ಕೆಯಾಗಿದ್ದಾರೆ.
ತಂಡದ ಮುಖ್ಯ ಕೋಚ್ ಆಗಿ ಜಗದೀಶ್ ಪಾಣತ್ತಲೆ ಕಾರ್ಯನಿರ್ವಹಿಸಲಿದ್ದು, ವ್ಯವಸ್ಥಾಪಕರಾಗಿ ದರ್ಶನ್ ಸುಕುಮಾರ್, ಸಹಾಯಕ ವ್ಯವಸ್ಥಾಪಕರಾಗಿ ದೀಪು ಮಾಚಯ್ಯ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ (ಕೆಡಿಎಫ್ಎ) ಕಾರ್ಯದರ್ಶಿ ನಾಗೇಶ್ ಪಂದಿಕAಡ ತಂಡದ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ತಂಡದ ಪ್ರಕಟಣೆ ಕಾರ್ಯಕ್ರಮ ಅಮ್ಮತ್ತಿ ಮೈದಾನದಲ್ಲಿ ನಡೆಯಿತು. ಪಂದ್ಯಾವಳಿಗೆ ತೆರಳಲಿರುವ ಆಟಗಾರರಿಗೆ ಅಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದರು. ಕೊಡಗು ಜಿಲ್ಲೆಯ ಫುಟ್ಬಾಲ್ ಪರಂಪರೆಗೆ ತಕ್ಕ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಈ ಬಾರಿ ತಂಡದ ಟ್ರ್ಯಾಕ್ಸೂಟ್ಗಳಿಗೆ ನಾಚಿಯಪ್ಪನ್ ಕುಮಾರನ್ ಎಸ್ಟೇಟ್ ಪ್ರಾಯೋಜಕತ್ವ ನೀಡಿದ್ದು, ತಂಡದ ಸಿದ್ಧತೆಗೆ ಬೆಂಬಲ ನೀಡಿದ ಅವರ ಕ್ರೀಡಾಪ್ರೋತ್ಸಾಹವನ್ನು ಕೆಡಿಎಫ್ಎ ಪದಾಧಿಕಾರಿಗಳು ಅಭಿನಂದಿಸಿದರು. ಜಿಲ್ಲೆಯ ಕ್ರೀಡೆಗೆ ಉದ್ಯಮಿಗಳು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಹಾಗೂ ದಾನಿಗಳ ಸಹಕಾರ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಪ್ರೋತ್ಸಾಹದಿಂದ ಯುವ ಆಟಗಾರರಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
-ಅಶೋಕ್, ಮಡಿಕೇರಿ