ಐಗೂರು, ಜು. ೪: ಸೋಮವಾರಪೇಟೆ - ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಯ ಹೊಸತೋಟದ ಬಳಿ ರಸ್ತೆ ಬದಿಯಲ್ಲಿ ಒಣಗಿದ ದೊಡ್ಡ ಗಾತ್ರದ ಮರವೊಂದು ಅಪಾಯಕಾರಿಯಾಗಿ ನಿಂತಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಗಾಳಿ, ಮಳೆಯ ತೀವ್ರತೆ ಹೆಚ್ಚುತ್ತಿರುವುದರಿಂದ ಒಣಗಿದ ಮರಗಳು ಯಾವುದೇ ಕ್ಷಣದಲ್ಲಿ ರಸ್ತೆಗೆ ಉರುಳುವ ಸಾಧ್ಯತೆ ಇದೆ. ಸೋಮವಾರಪೇಟೆಯಿಂದ ಮಡಿಕೇರಿ ತನಕವೂ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ಮರಗಳನ್ನು ತೆರವುಗೊಳಿಸಲು ಸಂಬAಧಪಟ್ಟ ಇಲಾಖೆಯವರು ತೋಟಗಳ ಮಾಲೀಕರಿಗೆ ಸೂಚನೆ ನೀಡಬೇಕಾಗಿದೆ ಎಂದು ಐಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ದಿನೇಶ್ ಹಾಗೂ ಹೊಸತೋಟ ಮತ್ತು ಮಾದಾಪುರದ ಸಾರ್ವಜನಿಕರು ಒತ್ತಾಯಿಸಿದ್ದಾರೆ.