ಮಡಿಕೇರಿ, ಜು. ೩: ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ರೂ. ೪.೮೩ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಸುಮಾರು ರೂ. ೪.೮೩ ಕೋಟಿ ವೆಚ್ಚದಲ್ಲಿ ೨.೧೨ ಎಕರೆ ಜಾಗದಲ್ಲಿ ಕಾಮಗಾರಿ ನಿರ್ಮಾಣವಾಗಲಿದೆ. ಸಾರ್ವ ಜನಿಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ವಾಹನ ಚಾಲನೆ ಮಾಡಲು ಸಹಕಾರವಾಗುತ್ತದೆ. ಸರ್ಕಾರ ದಿಂದ ಅನುಮೋದನೆ ಪಡೆಯಲಾಗಿದ್ದು, ಸಾರಿಗೆ ಸಚಿವರು ಸಹಕಾರ ನೀಡಿರುವುದಾಗಿ ಹೇಳಿದರು.
ಈ ಸಂದರ್ಭ ಕಾಮಗಾರಿಯ ವಿವರಣೆಯನ್ನು ಮೈಸೂರು ವಿಭಾಗದ ಇಂಜಿನಿಯರ್ ವಿವರಣೆ ನೀಡುತ್ತಾ, ಈ ಕಾಮಗಾರಿಯನ್ನು ಕೆ.ಎಸ್.ಆರ್.ಟಿ.ಸಿ. (ಸಿ.ಇ. ವಿಭಾಗ) ಬೆಂಗಳೂರಿನವರು ನಿರ್ವಹಿಸಲಿದ್ದು, ಮಳೆಯನ್ನು ಹೊರತುಪಡಿಸಿ, ೧೨ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೆನ್ನಿರ ಮೈನಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಮುಖರಾದ ಹೆಚ್.ಎ. ಹಂಸ, ಪ್ರಕಾಶ್ ಆಚಾರ್ಯ, ವಿ.ಜಿ. ಮೋಹನ್, ಜಾನ್ಸನ್ ಪಿಂಟೋ, ಕೋಚನ ಚೇತನ್, ಹರಿಪ್ರಸಾದ್, ಕೊತ್ತೋಳಿ ಕವನ್, ಅರ್ಜುನ, ಶರಣ್, ಶಶಿ, ಸದಾ ಮುದ್ದಪ್ಪ, ಜಿ.ಸಿ. ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್, ಇನ್ಸ್ಪೆಕ್ಟರ್ ಮೋಹನ್ ಕುಮಾರ್, ವ್ಯವಸ್ಥಾಪಕಿ ಸಲೀಮಾ, ಸೌಮ್ಯ, ರೀಟಾ ಇತರರು ಇದ್ದರು.