ಕೂಡಿಗೆ, ಜು. ೩ : ಕುಶಾಲನಗರ ತಾಲೂಕು ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಬಿಳಿಸುಳಿ ರೋಗ ಪತ್ತೆಯಾಗಿ ಬೆಳೆ ಕುಂಠಿತವಾಗಿದೆ.

ಮೆಕ್ಕೆಜೋಳದ ಬಿತ್ತನೆ ಮಾಡಿ ಒಂದು ತಿಂಗಳಿನಲ್ಲಿ ಒಂದು ಅಡಿಗಳಷ್ಟು ಬೆಳೆ ಬಂದಿರುವ ಸಂದರ್ಭ ಬಿಳಿಸುಳಿ ರೋಗದಿಂದಾಗಿ ಮೆಕ್ಕೆಜೋಳದ ಗಿಡಗಳು ಸುರುಳಿಯ ರೂಪದಲ್ಲಿ ಬಂದು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದರಿಂದಾಗಿ ರೈತರು ರೋಗ ನಿರೋಧಕ ಶಕ್ತಿಯ ಔಷಧಿಯನ್ನು ಸಿಂಪಡಣೆ ಮಾಡುವಲ್ಲಿ ತೊಡಗಿದ್ದಾರೆ. ಮೊಳಕೆಯಲ್ಲಿ ಹಿನ್ನಡೆ ಉಂಟಾಗಿರುವುದು ರೈತರ ಜಮೀನಿನಲ್ಲಿ ಕಂಡುಬರುತ್ತಿದೆ.