ಮಡಿಕೇರಿ, ಜು. ೩: ಕೊಡಗು ಜಿಲ್ಲೆಯ ಹಲವು ನಿವೃತ್ತ ಸೇನಾಧಿಕಾರಿಗಳು - ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಪ್ರಮುಖರ ನಿಯೋಗವೊಂದು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಕೊಡಗು ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಇಬ್ಬರು ಮುಖಂಡರುಗಳನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ಪ್ರಮುಖರು ಈ ಬಗ್ಗೆ ಸಮಾಲೋಚನೆ ನಡೆಸಿದರು.

ಇದೇ ಸಂದರ್ಭದಲ್ಲಿ ಶಾಸಕ ಪೊನ್ನಣ್ಣ ಅವರ ಕಾರ್ಯವೈಖರಿ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮುಖರು ಮುಂದಿನ ಸಚಿವ ಸಂಪುಟದಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೊಡಗಿನ ಇನ್ನಷ್ಟು ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಬೇಕೆAದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕೊಡಗು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ದೇಶದ ರಕ್ಷಣಾ ಪಡೆಗೆ ಮತ್ತು ಕ್ರೀಡಾ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಹಾಕಿ ಕ್ರೀಡೆಗೆ ನೀಡಿರುವ ಅಪಾರ ಕೊಡುಗೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ.

೧೯೯೯ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಮೂವರು ಕೊಡಗಿನ ನಾಯಕರು ಸಚಿವರಾಗಿದ್ದರು. ಆದರೆ, ಆ ನಂತರದ ದಿನಗಳಲ್ಲಿ ಕೊಡಗು ಜಿಲ್ಲೆಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ ಎಂಬುದು ಇಲ್ಲಿನ ಜನರ ಅಳಲಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಎ.ಎಸ್. ಪೊನ್ನಣ್ಣ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ಎಲ್ಲರನ್ನು ಒಳಗೊಂಡ ರಾಜಕೀಯಕ್ಕಾಗಿ ಶ್ರಮಿಸಿದ್ದಾರೆ.

ಕೊಡಗಿನ ಪ್ರಮುಖ ಸಮಸ್ಯೆಗಳಾದ ಮಾನವ-ಪ್ರಾಣಿ ಸಂಘರ್ಷ, ಅತೀಂದ್ರಿಯ ಪ್ರವಾಸೋದ್ಯಮ ಮತ್ತು ಭೂ ಪರಿವರ್ತನೆಯಂತಹ ಸವಾಲುಗಳನ್ನು ಬಗೆಹರಿಸಲು ಪೊನ್ನಣ್ಣ ಅವರಂತಹ ಸಮರ್ಥ ನಾಯಕನ ಅಗತ್ಯವಿದೆ ಎಂದು ಕೊಡಗಿನ ನಿವೃತ್ತ ಸೇನಾ ಸಿಬ್ಬಂದಿ, ಒಲಿಂಪಿಯನ್ನರು ಮತ್ತು ನಾಗರಿಕರು ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಭಾರತ ಹಾಕಿ ತಂಡದ ಮಾಜಿ ನಾಯಕ ಡಾ. ಎಂ.ಪಿ. ಗಣೇಶ್, ನಿವೃತ್ತ ಸೇನಾಧಿಕಾರಿಗಳಾದ ಏರ್‌ಮಾರ್ಷಲ್ ಬಲ್ಟಿಕಾಳಂಡ ಚಂಗಪ್ಪ, ಮೆ.ಜ. ಕೊಡಂದೆರ ಅರ್ಜುನ್ ಮುತ್ತಣ್ಣ, ಮೆ.ಜ. ಬಾಚಮಂಡ ಕಾರ್ಯಪ್ಪ, ಬ್ರಿಗೇಡಿಯರ್ ಮಾಳೇಟಿರ ಎ. ದೇವಯ್ಯ, ಬ್ರಿಗೇಡಿಯರ್ ಚೇನಂಡ ಚೀಯಣ್ಣ, ಲೆ.ಕ. ಮಹಾವೀರ ಚಕ್ರ ಪುರಸ್ಕೃತ ಪಿ.ಎಸ್. ಗಣಪತಿ, ಒಲಂಪಿಯನ್‌ಗಳಾದ ಎಂ.ಎA. ಸೋಮಯ್ಯ, ಲೆ.ಕ. ಬಾಳೆಯಡ ಸುಬ್ರಮಣಿ, ಕರ್ನಲ್ ಸಿ.ಪಿ. ಮುತ್ತಣ್ಣ, ಮತ್ತಿತರರು ಹಾಜರಿದ್ದರು. ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಚೆಯ್ಯಂಡ ಸತ್ಯ, ಜಮ್ಮಡ ಗಣೇಶ್ ಅಯ್ಯಣ್ಣ ಜತೆಗಿದ್ದರು.