ಮಡಿಕೇರಿ, ಜು. ೪: ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಮತ್ತು ಕಾರ್ಯದರ್ಶಿಯಾಗಿ ಮೃಣಾಲಿನಿ ಚಿಣ್ಣಪ್ಪ ಅಧಿಕಾರ ಸ್ವೀಕರಿಸಿದರು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಗೆ ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಡಾ. ಜಯಲಕ್ಷಿö್ಮ ಪಾಟ್ಕರ್ ಪದಗ್ರಹಣ ನೆರವೇರಿಸಿದರು. ಇನ್ನರ್ ವೀಲ್ ಜಿಲ್ಲಾ ಸಮಿತಿಯ ನಿರ್ದೇಶಕಿ ದಿವ್ಯ ಮುತ್ತಣ್ಣ, ನಿಕಟಪೂರ್ವ ಅಧ್ಯಕ್ಷೆ ಲಲಿತಾ ರಾಘವನ್ , ನಿಕಟಪೂರ್ವ ಕಾರ್ಯದರ್ಶಿ ನಮಿತಾ ರೈ ವೇದಿಕೆಯಲ್ಲಿದ್ದರು.
ಆರೋಗ್ಯ ಚಿಕಿತ್ಸೆಗಾಗಿ ಸಿ.ಕೆ. ನಂದೀಶ್ ಕುಮಾರ್ ಅವರಿಗೆ ರೂ. ೫ ಸಾವಿರ ಮತ್ತು ಶೈಕ್ಷಣಿಕ ನೆರವಾಗಿ ಬಿ.ಯು. ಹಿತಶ್ರೀ ಅವರಿಗ ರೂ. ೫ ಸಾವಿರ ಆರ್ಥಿಕ ನೆರವನ್ನು ಇದೇ ಸಂದರ್ಭ ಇನ್ನರ್ ವೀಲ್‌ನಿಂದ ನೀಡಲಾಯಿತು. ಮಡಿಕೇರಿ ರೋಟರಿ ಅಧ್ಯಕ್ಷ ಮನೋಹರ್ ಕಾಮತ್ ಅವರು ಇನ್ನರ್ ವೀಲ್ ವಾರ್ತಾ ಸಂಚಿಕೆ ಗಿರಿಶೃಂಗವನ್ನು ಲೋಕಾರ್ಪಣೆಗೊಳಿಸಿದರು. ವಿಜಯಲಕ್ಷಿö್ಮ ಚೇತನ್, ದೇಚು ಶ್ಯಾಮ್, ರೇಣುಕಾ ಸುಧಾಕರ್ ಪ್ರಾರ್ಥಿಸಿ, ಗುಲಾಬಿ ಜನಾರ್ಧನ್ ವಂದಿಸಿದರು. ಖಜಾಂಚಿ ಡಾ. ಶುಭಾ ರಾಜೇಶ್ ಸುಮಾ ತಿಮ್ಮಯ್ಯ, ನಿಶಾ ಮೋಹನ್, ಅಗ್ನೇಸ್ ಮುತ್ತಣ್ಣ, ತೃಪ್ತಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.