ಕೋವರ್ ಕೊಲ್ಲಿ ಇಂದ್ರೇಶ್
ಮAಗಳೂರು, ಜು. ೩: ಕಳೆದ ಜೂನ್ ೨೯ ರ ಮುಂಜಾನೆ ಬೈಕಂಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಕಾರು ತಡೆದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಿಗೆ ಸಾಗಾಟ ಬೆಂಬಲ ಮತ್ತು ಆಶ್ರಯ ನೀಡಿದ ಕೊಡಗು ಜಿಲ್ಲೆಯ ಇಬ್ಬರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಆರ್ ಕೆ ನಿಮಿಲ್ (೩೭), ಕೊಡಗು ಜಿಲ್ಲೆಯ ಹಾಕತ್ತೂರು ತೊಬ್ಬೊಟ್ಟು ಮನೆ ನಿವಾಸಿ ಇರ್ಷಾದ್ (೪೦) ಮತ್ತು ಮಡಿಕೇರಿ ಮಾರ್ಕೆಟ್ ಬಳಿಯ ನಿವಾಸಿ ಮುಸ್ತಫಾ (೩೯) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ೧೦ ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕೇರಳದ ಕಣ್ಣೂರು ಪಯ್ಯನ್ನೂರು ಚಿನ್ನದ ವ್ಯಾಪಾರಿ ವಿಕಾಸ್ ಸುಬ್ಬರಾವ್ ಧನವಡೆ(೪೪) ಅವರು ಪತ್ನಿ ಮತ್ತು ಮಗನೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿ ಮದುವೆ ಮುಗಿಸಿಕೊಂಡು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬರುತ್ತಿದ್ದಾಗ ಜೂ. ೨೯ ರಂದು ನಸುಕಿನ ೨.೪೫ಕ್ಕೆ ಬೈಕಂಪಾಡಿ ರಾಷ್ಟಿçÃಯ ಹೆದ್ದಾರಿಯಲ್ಲಿ ಮೂರು ಕಾರುಗಳಲ್ಲಿ ಬಂದ ಏಳು-ಎಂಟು ಮಂದಿ ಮುಸುಕುಧಾರಿಗಳು ಕಾರನ್ನು ಅಡ್ಟಗಟ್ಟಿ ವಿಕಾಸ್ ಅವರನ್ನು ಹೊರಗೆಳೆದು ಪತ್ನಿ ಮತ್ತು ೧೪ ವರ್ಷದ ಮಗನನ್ನು ಕಾರು ಸಮೇತ ಅಪಹರಣ ಮಾಡಿದ್ದರು. ಕೆಲವು ಕಿಲೊಮೀಟರ್ ದೂರ ಸಾಗಿದ ನಂತರ ಪತ್ನಿಯ ಬಳಿಯಿದ್ದ ೧೮೦ ಗ್ರಾಮ್ ಚಿನ್ನದ ಆಭರಣ , ೨ ಮೊಬೈಲ್ ಫೋನ್ ಮತ್ತು ರೂ. ೩ ಲಕ್ಷದ ವಾಹನವನ್ನು ದರೋಡೆ ಮಾಡಿ ಅವರನ್ನು ಇಳಿಸಿ ಕಾರ್ ಸಹಿತ ಪರಾರಿ ಆಗಿದ್ದರು. ದರೋಡೆ ಮಾಡಿದ ವಸ್ತುಗಳ ಒಟ್ಟು ಮೌಲ್ಯ ೨೩.೧೦ ಲಕ್ಷ ರೂಪಾಯಿಗಳೆಂದು ಪೊಲೀಸರು ಅಂದಾಜಿಸಿದ್ದರು. ಮರುದಿನ ದರೋಡೆ ಮಾಡಿದ್ದ ನಂಬರ್ ಪ್ಲೇಟ್ ಕಿತ್ತ ಕಾರು ಬಂಟ್ವಾಳ ತಾಲೂಕು ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ವ್ಯಾಪಾರಿಯು ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ಚಿನ್ನವನ್ನು ಕಾರಿನಲ್ಲಿ ಕೇರಳಕ್ಕೆ ಸಾಗಿಸುತ್ತಿರಬಹುದೆಂಬ ಅಂದಾಜಿನಲ್ಲಿ ಆರೋಪಿಗಳು ಸಂಚು ರೂಪಿಸಿ ದರೋಡೆ ಮಾಡಿದ್ದರು. ದರೋಡೆಯ ನಂತರ ಕಾರಿನ ಸೀಟನ್ನೆಲ್ಲ ಸಂಪೂರ್ಣ ಚಾಕುವಿನಿಂದ ಕುಯ್ದು ಚಿನ್ನಕ್ಕಾಗಿ ಶೋಧ ನಡೆಸಿದ್ದರು.
ಮೂರು ತಂಡಗಳು ಆರೋಪಿಗಳ ಶೋಧನೆಯಲ್ಲಿ ತೊಡಗಿದ್ದು ಕಣ್ಣೂರು ಜಿಲ್ಲೆ ಚಾಲ ಎಂಬಲ್ಲಿಯ ಆಸ್ಟರ್ ಮಿಮ್ಸ್ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಆಸ್ಪತ್ರೆ ಸಮೀಪದಲ್ಲಿ ನಿಮಿಲ್‌ನನ್ನು ಬಂಧಿಸಿದ್ದಾರೆ. ಪಣಂಬೂರು ಠಾಣೆಯ ಎಸ್‌ಐ ಜ್ಞಾನಶೇಖರ ಅವರ ತಂಡ ಆರೋಪಿಗಳಿಗೆ ಸಹಕರಿಸಿ ಆಶ್ರಯ ನೀಡಿದ ಮಡಿಕೇರಿ ತಾಲೂಕಿನ ನಿವಾಸಿ ಇರ್ಷಾದ್ (೪೦) ನನ್ನು ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿಗಳಿಗೆ ಕಾರನ್ನು ಒದಗಿಸಿ ಆಶ್ರಯ ನೀಡಿದ ಇನ್ನೋರ್ವ ಆರೋಪಿ ಮುಸ್ತಾಫ (೩೯) ಎಂಬಾತನನ್ನು ಮಡಿಕೇರಿ ತಾಲೂಕು ಮೂರ್ನಾಡು ಜಂಕ್ಷನ್‌ನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ವಿಚಾರಣೆಯಿಂದ ಕೃತ್ಯದಲ್ಲಿ ಒಟ್ಟು ೧೪ ಆರೋಪಿಗಳು ನೇರವಾಗಿ ಭಾಗಿಯಾಗಿದ್ದು ಇಬ್ಬರು ಆರೋಪಿಗಳು ಕೃತ್ಯಕ್ಕೆ ಸಹಕರಿಸಿ ಆರೋಪಿತರಿಗೆ ಆಶ್ರಯ ನೀಡಿದ ಬಗ್ಗೆ ತಿಳಿದು ಬಂದಿದೆ. ಪ್ರಕರಣದಲ್ಲಿ ಭಾಗಿಯಾದ ಒಟ್ಟು ೧೬ ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಿ ಶುಕ್ರವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳ ಸಹಿತ ಒಟ್ಟು ೧೩ ಆರೋಪಿಗಳ ಪ್ತತೆಗೆ ಬಾಕಿ ಇರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ೪ ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಸ್ವಾಧೀನಪಡಿಸಿದ್ದು, ಉಳಿದ ೩ ಕಾರುಗಳು ಮತ್ತು ದರೋಡೆ ಮಾಡಿರುವ ೧೮೦ ಗ್ರಾಂ ಚಿನ್ನಾಭರಣ ಹಾಗೂ ೨ ಮೊಬೈಲ್ ಫೋನ್ ಪತ್ತೆಗೆ ಬಾಕಿ ಇರುತ್ತದೆ. ಆರೋಪಿಗಳೆಲ್ಲರೂ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದವರೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.