ನಗರಸಭೆ ಅಲ್ಲ ನರಕಸಭೆ
ಮಾರುಕಟ್ಟೆಯಲ್ಲಿರುವ ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲು ಉಪಲೋಕಾಯುಕ್ತರು ಬರಬೇಕಾಗಿತ್ತಾ ? ಎಂದು ಕಿಡಿಕಾರಿದ ಉಪಲೋಕಾಯುಕ್ತರು ಇಲ್ಲಿರುವುದು ನಗರಸಭೆ ಅಲ್ಲ ನರಕಸಭೆ ಎಂದು ಟೀಕಿಸಿದರು.
ನಿನ್ನೆ ಮಾರುಕಟ್ಟೆ ಸಂಕೀರ್ಣಕ್ಕೆ ಭೇಟಿ ನೀಡಿದ್ದ ಸಂದರ್ಭ ಕಂಡುಬAದ ಅವ್ಯವಸ್ಥೆ ಬಗ್ಗೆ ತಕ್ಷಣ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದ ಹಿನ್ನೆಲೆ ಇಂದು ಪೌರಾಯುಕ್ತ ರಮೇಶ್ ಅವರು ಕೈಗೊಂಡ ಕ್ರಮದ ಫೋಟೋವನ್ನು ಉಪಲೋಕಾಯುಕ್ತ ಫಣೀಂದ್ರ ಅವರ ಬಳಿ ತೋರಿಸಲು ಆಗಮಿಸಿದ್ದರು.
ಅಧಿಕಾರಿಗಳು ಸೂಕ್ತವಾಗಿ ಹಾಗೂ ಜನಪರವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡಬಾರದು. ಮಾರುಕಟ್ಟೆಯಲ್ಲಿರುವ ಸಮಸ್ಯೆ ಶೀಘ್ರ ಪರಿಹಾರವಾಗಬೇಕು. ನಂತರವಷ್ಟೆ ಸುಮೊಟೋ ಪ್ರಕರಣ ರದ್ದುಮಾಡುತ್ತೇನೆ ಎಂದು ಎಚ್ಚರಿಸಿದರು.