ಮೈಸೂರು, ಜು. ೩: ಮೈಸೂರಿನ ಕೊಡವ ಸಮಾಜ ಯೂತ್ ವಿಂಗ್,ಮೈಸೂರು ಕೊಡವ ಸಮಾಜ ಹಾಗೂ ಹಾಕಿ ಮೈಸೂರು ಆಶ್ರಯದಲ್ಲಿ ಆಯೋಜಿಸಿರುವ ಕೊಡವ ಹಾಕಿ ಪ್ರೀಮಿಯರ್ ಲೀಗ್ ಸೀಸನ್-೨ಕ್ಕೆ ನಗರದ ಚಾಮುಂಡಿ ವಿಹಾರ ಟರ್ಫ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಚಾಲನೆ ದೊರೆಯಿತು.
ಮೂರು ದಿನಗಳ ಟೂರ್ನಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಚಾಲನೆ ನೀಡಿ ಮಾತನಾಡಿ, ಹಾಕಿ ಭಾರತ ದೇಶದ ಅತ್ಯಂತ ಹೆಮ್ಮೆಯ ಕ್ರೀಡೆಗಳಲ್ಲಿ ಒಂದಾಗಿದೆ. ಇದು ಹಲವು ವರ್ಷಗಳ ಕಾಲ ಭಾರತದ ರಾಷ್ಟಿçÃಯ ಕ್ರೀಡೆಯೆಂದು ಜನಪ್ರಿಯವಾಗಿ ಪರಿಗಣಿಸಲ್ಪಟ್ಟಿತ್ತು. ಭಾರತವು ಒಲಿಂಪಿಕ್ನಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದು ವಿಶ್ವದ ಗಮನ ಸೆಳೆದಿದೆ. ವಿಶೇಷವಾಗಿ ಧ್ಯಾನ್ಚಂದ್ ಅವರಂತಹ ಶ್ರೇಷ್ಠ ಆಟಗಾರರು ಭಾರತದ ಹಾಕಿಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಈ ರೀತಿಯ ಹಾಕಿ ವಿಜೃಂಭಣೆ ಕಾಲ ಮತ್ತೆ ಮರುಕಳಿಸಬೇಕಿದೆ. ಅದಕ್ಕಾಗಿ ಈ ರೀತಿಯ ಟೂರ್ನಿಗಳ ಆಯೋಜನೆ ಅಗತ್ಯ ಎಂದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಾಕಿಯ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಆಧುನಿಕ ಕ್ರೀಡಾಂಗಣಗಳು, ಉತ್ತಮ ತರಬೇತಿ, ಯುವ ಪ್ರತಿಭೆಗಳಿಗೆ ಅವಕಾಶಗಳು ಹಾಗೂ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದ ಸ್ಪರ್ಧೆಗಳು ಹಾಕಿಯ ಅಭಿವೃದ್ಧಿಗೆ ನೆರವಾಗಿವೆ. ಮಹಿಳಾ ಹಾಗೂ ಪುರುಷರ ಎರಡೂ ತಂಡಗಳು ಉತ್ತಮ ಸಾಧನೆ ಮಾಡಿ ದೇಶದ ಗೌರವವನ್ನು ಹೆಚ್ಚಿಸುತ್ತಿವೆ ಎಂದರು.
ಕ್ರೀಡೆಗೆ ಮಹತ್ವ ನೀಡಿ, ಹಾಕಿಯಂತಹ ತಂಡದ ಆಟಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯ, ಶಿಸ್ತು, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಗೋ ಸ್ಪೋರ್ಟ್ಸ್ ಫೌಂಡೇಶನ್ನ ಮಾಜಿ ಸಿಇಓ ಬಲ್ಲಚಂಡ ದೀಪ್ತಿ ಬೋಪಯ್ಯ, ಅಂತರರಾಷ್ಟಿçÃಯ ಕ್ರಾಸ್ ಕಂಟ್ರಿ ಸ್ಕೀಯರ್ ತೆಕ್ಕಡ ಭವಾನಿ ನಂಜುAಡ, ಕೊಡವ ಸಮಾಜ ಮೈಸೂರು ಅಧ್ಯಕ್ಷ ಪೊಂಜAಡ ಗಣಪತಿ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಹಾಕಿ ಮೈಸೂರು ಅಧ್ಯಕ್ಷ ಕೊಂಗAಡ ದಿಲೀಪ್ ಬಿದ್ದಪ್ಪ, ಹಾಕಿ ಮೈಸೂರು ಉಪಾಧ್ಯಕ್ಷ ಕೋಟೆರ ಮುದ್ದಯ್ಯ, ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ನ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ ಹಾಗೂ ಕೊಡವ ಸಮಾಜ ಮೈಸೂರು ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೈಸೂರು, ಬೆಂಗಳೂರು, ಕೊಡಗು ಜಿಲ್ಲೆಗಳಿಂದ ಒಟ್ಟು ೧೦ ಫ್ರಾö್ಯಂಚೈಸಿ ತಂಡಗಳು ಭಾಗವಹಿಸಿವೆ.
ಅಂಜಿಗೇರಿ ನಾಡು ತಂಡವು ಕೊಡವು ವಾರಿರ್ರ್ಸ್ ವಿರುದ್ಧ, ಪಳೇ ತಾಲೂಕು ತಂಡವು ಕೂರ್ಗ್ ಯುನೈಟೆಡ್ ವಿರುದ್ಧ, ಕಾಕೋಟ್ ಸ್ಟೆçöÊರ್ರ್ಸ್ ಎಂಟಿಬಿ ರಾಯಲ್ಸ್ ವಿರುದ್ಧ, ಅಂಜಿಗೇರಿ ನಾಡು ತಂಡವು ಸೌತ್ ಸೈಡ್ ರೇಂರ್ರ್ಸ್ ವಿರುದ್ಧ, ಕೂರ್ಗ್ ಟೈಟಾನ್ಸ್ ತಂಡವು ಕನೆಕ್ಟಿಂಗ್ ಕೊಡವಾಸ್ ವಿರುದ್ಧ, ಪಳೇ ತಾಲೂಕು ತಂಡವು ಕೊಡವು ವಾರಿರ್ರ್ಸ್ ವಿರುದ್ಧ, ಟೀಮ್ ಕೊಡವಾ ಟ್ರೆöÊಬ್ ತಂಡವು ಕಾಕೋಟ್ ಸ್ಟೆçöÊರ್ರ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದವು.