ವೀರಾಜಪೇಟೆ, ಜು. ೩: ವೀರಾಜಪೇಟೆ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಲಯಾರಣ್ಯಾಧಿಕಾರಿ ಉಲ್ಲಾಸ್ ಪ್ರಕಾಶ್ ಮಾದಾರ ಅವರನ್ನು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಆರೋಪ ಸಾಬೀತು ಆದ ಕಾರಣ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಪಾಟಿಲ್ ಸೇವೆಯಿಂದ ಕಡ್ಡಾಯ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಿವೃತ್ತಿಗೊಳಿಸುವ ದಂಡನೆ ನೀಡಿದ್ದಾರೆ.
ಜಿಲ್ಲೆಯ ವೀರಾಜಪೇಟೆಯ ಉಪ ವಲಯಾರಣ್ಯಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಂ.ಪಿ. ಮನು ಅವರು ತಮ್ಮ ಮನೆ ದುರಸ್ತಿ ಸಲುವಾಗಿ ಮರಗಳನ್ನು ಖರೀದಿಸಿ ಮನೆಯ ಬಳಿ ಇಟ್ಟಿರುವುದನ್ನು ಗಮನಿಸಿ ಪ್ರಕರಣ ದಾಖಲಿಸದೆ ಇರಲು ೨೦ ರಿಂದ ೩೦ ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬAಧಿಸಿದAತೆ ಉಲ್ಲೇಖಿತ ಸರ್ಕಾರ ಆದೇಶದಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ ೧೯೫೭ರ ನಿಯಮ (೮)(vi)ರಲ್ಲಿನ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.