ಸಿದ್ದಾಪುರ, ಜು. ೨: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕುಕ್ಲೂರು, ಕದನೂರು, ಬೆಳ್ಳರಿಮಾಡು, ಮೈತಾಡಿ, ಚಾಮಿಯಾಲ, ಪುದುಕೋಟೆ, ಗ್ರಾಮಗಳ ವ್ಯಾಪ್ತಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ತಾ. ೩ ರಂದು (ಇಂದು) ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಈ ಭಾಗದ ರೈತರು, ಕಾರ್ಮಿಕರು ಹಾಗೂ ಶಾಲೆ-ಕಾಲೇಜುಗಳಿಗೆ ತೆರಳುವ ಮಕ್ಕಳು ಮತ್ತು ವಾಹನ ಚಾಲಕರು ಎಚ್ಚರಿಕೆವಹಿಸಿ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಅವರು ಮನವಿ ಮಾಡಿದ್ದಾರೆ.