ಮಡಿಕೇರಿ, ಜು. ೨: ೨೦೨೬-೨೭ನೇ ರ ಕ್ಯಾಲ್ಸ್ ವಿದ್ಯಾರ್ಥಿಗಳ ವಿದ್ಯಾರ್ಥಿ ಪರಿಷತ್ತಿನ ಸಮಾರಂಭ ಇತ್ತೀಚೆಗೆ ಕ್ಯಾಲ್ಸ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮುಕ್ಕಾಟಿರ ಡಾ. ಕಾರ್ಯಪ್ಪ, ಹೃದ್ರೋಗ ತಜ್ಞರು ಹಾಗೂ ಅವರ ಪತ್ನಿ ಡಾ. ಫಾತಿಮಾ ಕಾರ್ಯಪ್ಪ, ಸ್ತಿçà ರೋಗ ತಜ್ಞೆ ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೃತಕಬುದ್ಧಿಮತ್ತೆಗೆ ದಾಸರಾಗದೆ ತಮ್ಮ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಹಾಗೆಯೇ ತಮ್ಮ ಸುತ್ತಲಿನ ಪರಿಸರವನ್ನು ಆನಂದಿಸುವುದರೊAದಿಗೆ ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು ಎಂದರು.

ಎಲ್ಲರೂ ನಾಯಕರಾಗಿ ಆಯ್ಕೆಯಾಗಲು ಸಾಧ್ಯವಿಲ್ಲ. ಆದರೆ ಆಯ್ಕೆಯಾಗದವರು ನಾಯಕರಾಗಲು ಅರ್ಹರಲ್ಲ ಎಂದು ಅರ್ಥವಲ್ಲ. ಪ್ರಮಾಣವಚನ ಕೇವಲ ಮಾತಿಗೆ ಸೀಮಿತವಾಗದೆ ನಮ್ಮ ದಿನನಿತ್ಯದ ನಡೆನುಡಿಯಲ್ಲಿ ಬಿಂಬಿಸಬೇಕು ಎಂದರು.

ಶಾಲಾ ನಾಯಕನಾಗಿ ಮಯಾಂಕ್ ಮುತ್ತಣ್ಣ ಆಯ್ಕೆಯಾದರೆ, ಆಯಿರ ಬೋಪಣ್ಣ ಶಾಲಾ ನಾಯಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಕೆಲವು ಸಹನಾಯಕರು ಕೂಡ ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ಪ್ರಾಂಶುಪಾಲೆ ಗೌರಮ್ಮ ನಂಜಪ್ಪ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.