ಸುಂಟಿಕೊಪ್ಪ, ಜು. ೨: ಸಣ್ಣ ಪ್ರಮಾಣದ ಮಳೆ ಮತ್ತು ಗಾಳಿಗೆ ಕೆದಕಲ್ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಬೃಹತ್ ಮರವೊಂದು ಹೆದ್ದಾರಿಗೆ ಬಿದ್ದ ಪರಿಣಾಮ ೨ ಬದಿಯ ವಾಹನಗಳ ಸಂಚಾರ ಸ್ಥಗಿತಗೊಂಡು ಸರತಿ ಸಾಲಿನಲ್ಲಿ ನೂರಾರು ವಾಹನಗಳು ನಿಂತಿದ್ದ ದೃಶ್ಯ ಗೋಚರಿಸಿತು.
ಬೆಳಿಗ್ಗೆ ೬ ಗಂಟೆ ಸಂದರ್ಭ ಅಲ್ಪಪ್ರಮಾಣದ ಮಳೆ ಸುರಿಯುತ್ತಿದ್ದು, ಬಿರುಸಿನ ಗಾಳಿಯ ಪರಿಣಾಮ ಬೃಹತ್ ಗಾತ್ರದ ಮರವೊಂದು ರಾಷ್ಟಿçÃಯ ಹೆದ್ದಾರಿಗೆ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ಕಿಲೋಮೀಟರ್ ದೂರದವರೆಗೆ ವಾಹನಗಳು ಸರತಿ ಸಾಲಿನಲ್ಲಿ ಸುಮಾರು ೨ ಗಂಟೆಗಳ ಕಾಲಗಳ ಸ್ಥಗಿತಗೊಂಡು ಪ್ರಯಾಣಿಕರು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಯಿತು.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಗ್ರಾಮಸ್ಥರು ಆಗಮಿಸಿ ಮರವನ್ನು ಕತ್ತರಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.