ಮಡಿಕೇರಿ, ಜು. ೨: ಮಡಿಕೇರಿ ರೋಟರಿ ವುಡ್ಸ್ ಪದಗ್ರಹಣ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ನಡೆಯಿತು.

೨೦೨೬-೨೭ ಸಾಲಿನ ಅಧ್ಯಕ್ಷರಾಗಿ ಪ್ರಮಿಳಾ ಕೆ ಶೆಟ್ಟಿ ಅವರು ಅಧಿಕಾರ ಸ್ವೀಕಾರ ಮಾಡಿದರು. ಸ್ಮಿತಾ ಚಂಗಪ್ಪ ಅವರು ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.

ರೋಟರಿ ಜಿಲ್ಲೆ-೩೧೯೨,ಬೆಂಗಳೂರು ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ಎಲಿಝಬೆತ್ ಚೆರಿಯನ್ ಅವರು ಸಮಾರಂಭದ ಮುಖ್ಯ ಅತಿಥಿ ಮತ್ತು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರೋಟರಿ ವುಡ್ಸ್ಗೆ ಸೇರ್ಪಡೆಯಾದ ನೂತನ ಸದಸ್ಯರುಗಳಾದ ಚೇತನ್ ಹೆಚ್.ಜಿ, ಶ್ರೀನಿವಾಸ್ ಮತ್ತು ಪವನ್ ಕುಲಾಲ್ ಅವರಿಗೆ ಪದಗ್ರಹಣ ಆಧಿಕಾರಿಗಳು ಸದಸ್ಯತನದ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ನಿರ್ಗಮಿತ ಅಧ್ಯಕ್ಷರಾದ ಕಿರಣ್ ಕುಂದರ್ ಮಾತನಾಡಿ, ನೂತನ ಅಧ್ಯಕ್ಷರಿಗೆ ಮತ್ತು ಕಾರ್ಯಕಾರಿ ಮಂಡಳಿಗೆ ಶುಭ ಕೋರಿದರು.

ಸಮಾರಂಭದ ವೇದಿಕೆಯಲ್ಲಿ ೨೦೨೫-೨೬ ರೋಟರಿ ಜಿಲ್ಲೆ-೩೧೮೧ ರ ವಲಯ ೬ರ ಅಸಿಸ್ಟೆಂಟ್ ಗವರ್ನರ್ ದಿಲನ್ ಚಂಗಪ್ಪ, ವಲಯ ಸೇನಾನಿ ಕೆ.ಸಿ ಕಾರ್ಯಪ್ಪ, ೨೦೨೬-೨೭ ಅಸಿಸ್ಟೆಂಟ್ ಗವರ್ನರ್ ರಂಗಸ್ವಾಮಿ ಹಾಗೂ ವಲಯ ಸೇನಾನಿ ವಸಂತ್ ಕುಮಾರ್ ಕೆ ಉಪಸ್ಥಿತರಿದ್ದರು. ರೋಟರಿ ಮಾಜಿ ಗವರ್ನರ್ ಡಾ. ರವಿ ಅಪ್ಪಾಜಿ ಹಾಗೂ ರೋಟರಿ ಮಡಿಕೇರಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರೋಟರಿ ಮಿಸ್ಟಿ ಹಿಲ್ಸ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಿಸ್ಟಿ ಹಿಲ್ಸ್ ಸದಸ್ಯರು ಮತ್ತು ವಲಯ ೬ರ ಅನೇಕ ಕ್ಲಬ್‌ಗಳ ಅಧ್ಯಕ್ಷರು ಹಾಗೂ ರೊಟೇರಿಯನ್ಸ್ ಭಾಗವಹಿಸಿದ್ದರು.