ಮಡಿಕೇರಿ, ಜು.೨: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ದಿನದ ೨೪ ಗಂಟೆಗಳೂ ಹಲವಾರು ಸೇವೆಗಳು ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತುರ್ತು ಔಷಧೀಯ ಸೇವಾ ವಿಭಾಗದ ಹೆಚ್.ಓ.ಡಿ (ಆeಠಿಣ oಜಿ ಇmeಡಿgeಟಿಛಿಥಿ ಒeಜiಛಿiಟಿe) ಡಾ. ಮೋಹನ್ ಅಪ್ಪಾಜಿ ಅವರು ಕೋರಿದ್ದಾರೆ.
ರಸ್ತೆ ಅಪಘಾತ, ಹಾವುಕಡಿತ, ವಿಷಸೇವನೆ, ಹಾನಿಕಾರಕ ಮಾತ್ರೆ ಸೇವನೆ, ಎತ್ತರದಿಂದ ಆಕಸ್ಮಿಕವಾಗಿ ಬೀಳುವುದು, ಸುಟ್ಟ ಗಾಯಗಳು, ವಿದ್ಯುತ್ ಅಪಘಾತ ಮತ್ತು ಸಿಡಿಲು ಗಾಯಗಳು, ನೀರಿನಲ್ಲಿ ಆಕಸ್ಮಿಕವಾಗಿ ಮುಳುಗುವುದು, ಭೂ ಕುಸಿತದಿಂದ ಆಗುವ ಗಾಯಗಳು, ಗುಂಡೇಟು ಗಾಯಗಳು, ಅನಾಥ ವಾರಸುದಾರರಿಲ್ಲದ ರೋಗಿಗಳು, ದೈಹಿಕ ಹಲ್ಲೆ, ಪ್ರಾಣಿಗಳ ದಾಳಿಯಿಂದಾಗುವ ಗಾಯಗಳು ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸಾ ವ್ಯವಸ್ಥೆ ಆಸ್ಪತ್ರೆಯಲ್ಲಿ ದೊರಕಲಿದ್ದು, ಈ ಸಂದರ್ಭಗಳಲ್ಲಿ ತುರ್ತು ಸೇವಾ ಸಂಖ್ಯೆ ಮೊ: ೮೭೬೨೮೯೮೧೩೧ ಅನ್ನು ಸಂಪರ್ಕಿಸಬಹುದಾಗಿದೆ. ಈ ಸಂಖ್ಯೆಯಿAದ ಪ್ರತಿಕ್ರಿಯೆ ಲಭಿಸದಿದ್ದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತುರ್ತು ಸಂದರ್ಭಗಳಲ್ಲಿ ಡಾ ಮೋಹನ್ ಅಪ್ಪಾಜಿ ಮೊ: ೯೮೪೫೪೭೧೫೬೯ ಅವರನ್ನು ಕೂಡ ಸಂಪರ್ಕಿಸಬಹುದಾಗಿದೆ ಎಂದು ಡಾ ಮೋಹನ್ ಅಪ್ಪಾಜಿ ಅವರು ‘ಶಕ್ತಿ‘ಗೆ ತಿಳಿಸಿದ್ದಾರೆ. ಇವೆಲ್ಲ ಪ್ರಕರಣಗಳನ್ನು ಮೆಡಿಕೋ-ಲೀಗಲ್ ಪ್ರಕರಣ ಗಳೆಂದು ಪರಿಗಣಿಸಲಾಗಿವೆ.
ಇತರ ಸೇವೆಗಳಾದ ಹೃದಯ ಸಂಬAಧಿ ಕಾಯಿಲೆಗಳು, ಪಾರ್ಶ್ವ ವಾಯು, ಪಿತ್ತಕೋಶದಲ್ಲಿ ಕಲ್ಲು, ಮಧುಮೇಹ, ಪ್ಯಾವಯಾಟೈಟಿಸ್, ಶ್ವಾಸಕೋಶದ ಕಾಯಿಲೆ, ನಾಯಿ ಕಡಿತ ಪ್ರಕರಣಗಳು, ಮೂಳೆ ಮತ್ತು ಕೀಲುಗಳ ತೊಂದರೆ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಕೂಡ ತುರ್ತು ಸೇವೆಗಳೆಂದು ಪರಿಗಣಿಸಿ ಚಿಕಿತ್ಸೆ ನೀಡಲು ಆಸ್ಪತ್ರೆ ಸುಸಜ್ಜಿತ ವ್ಯವಸ್ಥೆ ಹೊಂದಿದೆ ಎಂದು ಡಾ. ಮೋಹನ್ ಅಪ್ಪಾಜಿ ಅವರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಎ.ಜೆ ಲೋಕೇಶ್ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರಕುತ್ತಿದ್ದು, ಔಷಧೀಯ ಹಾಗೂ ತುರ್ತು ಸೇವಾ ವಿಭಾಗವು ದಿನದ ೨೪ ಗಂಟೆಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವ ಜನಿಕರು ತುರ್ತು ಸಂದರ್ಭ ದಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.