ಮಡಿಕೇರಿ, ಜು. ೨: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಹಾವಳಿಯನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ತಾ. ೬ ರಂದು ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.
ರಾಜ್ಯದಲ್ಲಿರುವ ಸರಕಾರದ ಜನಪ್ರತಿನಿಧಿಗಳೇ ಕೊಡಗಿನಲ್ಲಿದ್ದರೂ ವನ್ಯಜೀವಿ ಉಪಟಳ ಪರಿಹಾರವಾಗುವ ಲಕ್ಷಣ ಕಂಡುಬರುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ಕೇಂದ್ರದ ಕಡೆ ಶಾಸಕರು ಬೊಟ್ಟು ಮಾಡುತ್ತಾರೆಯೇ ಹೊರತು ಶಾಶ್ವತ ಪರಿಹಾರವೇನು ಎಂಬ ಉತ್ತರ ನೀಡುವುದಿಲ್ಲ. ಜನರಿಗೂ ಈ ಬಗ್ಗೆ ಆಕ್ರೋಶವಿದೆ. ಈ ಹಿಂದಿನಿAದಲೂ ಸಾರ್ವಜನಿಕರು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸುವಂತೆ ಒತ್ತಾಯಿಸುತ್ತ ಬರಲಾಗುತ್ತಿದೆ. ಆದರೆ, ಇದುವರೆಗೂ ಇದಕ್ಕೆ ಸ್ಪಂದನ ದೊರೆತಿಲ್ಲ. ಈ ಹಿಂದೆ ಕಸ್ತೂರಿ ರಂಗನ್ ವಿರೋಧಿ ಹೋರಾಟ ಪಕ್ಷಾತೀತವಾಗಿ ನಡೆದಿತ್ತು. ಅದೇ ರೀತಿ ಈ ಸಮಸ್ಯೆಗೂ ಹೋರಾಟದ ಅವಶ್ಯಕತೆಯಿದೆ. ಗ್ಯಾರಂಟಿ ಯೋಜನೆಗೆ ಸಾವಿರಾರು ಕೋಟಿ ವ್ಯಯಿಸುವ ಸರಕಾರ ವೈಜ್ಞಾನಿಕವಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲು
ಕೊಡಗು ಜಿಲ್ಲೆಗೆ ೪ಐದನೇ ಪುಟಕ್ಕೆ
ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸಿ-ಡಿ ಲ್ಯಾಂಡ್, ಸೆಕ್ಷನ್-೪ ಸಮಸ್ಯೆಗಳು ಕೂಡ ಇದ್ದು, ಈ ಬಗ್ಗೆಯೂ ಕ್ರಮಕೈಗೊಳ್ಳಬೇಕೆಂದ ಅವರು, ತಾ. ೬ ರಂದು ನಡೆಯಲಿರುವ ಹೋರಾಟ ಕೊಡ್ಲಿಪೇಟೆ-ಸೋಮವಾರಪೇಟೆ ಮೂಲಕ ಒಂದು ತಂಡ, ತೊರೆನೂರು-ಹೆಬ್ಬಾಲೆ, ಸಿದ್ದಾಪುರ-ನೆಲ್ಲಿಹುದಿಕೇರಿ, ಕುಟ್ಟ-ಮಡಿಕೇರಿ, ಭಾಗಮಂಡಲ-ಮಡಿಕೇರಿ ಹೀಗೆ ೫ ಕಡೆಗಳಿಂದ ವಾಹನ ಜಾಥಾ ಮಡಿಕೇರಿಗೆ ತಲುಪಲಿದೆ. ಮಧ್ಯಾಹ್ನ ೧೨.೩೦ರ ನಂತರ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ನಂತರ ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ವನ್ಯಜೀವಿ ದಾಳಿಯಿಂದ ಹಲವು ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸಿದೆ. ಜಿಲ್ಲೆಗೆ ಅಗತ್ಯ ಬ್ಯಾರಿಕೇಡ್, ಕಂದಕದ ಅವಶ್ಯಕತೆಯಿದೆ. ಸೂಕ್ತ ಕ್ರಮವಹಿಸದಿದ್ದರೆ ಕಾಡಾನೆ ಹಾವಳಿ ಇರುವ ಪ್ರದೇಶದ ಜನರನ್ನು ಸಂಘಟಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಅತ್ಯಂತ ಹೆಚ್ಚಿನ ತೆರಿಗೆ ಕೊಡಗಿನಿಂದ ಸರಕಾರದ ಬೊಕ್ಕಸ ಸೇರುತ್ತಿದೆ. ಆದರೆ, ಜಿಲ್ಲೆಗೆ ಮಾತ್ರ ಸೂಕ್ತ ಅನುದಾನ ನೀಡುತ್ತಿಲ್ಲ ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಹಂತದಲ್ಲಿದ್ದು, ಕಾಡಾನೆ ಹಾವಳಿ ಸೇರಿದಂತೆ ವಾಸ್ತವತೆ ತಿಳಿದಿರುವವರನ್ನೇ ಅರಣ್ಯ ಸಚಿವರನ್ನಾಗಿ ಮಾಡಬೇಕು ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಲೋಕೇಶ್, ವಕ್ತಾರ ಬಿ.ಕೆ. ಅರುಣ್ ಕುಮಾರ್ ಹಾಜರಿದ್ದರು.