ವೀರಾಜಪೇಟೆ, ಜು. ೨: ಅರಮೇರಿ ಮತ್ತು ಕಡಂಗಮರೂರು ಗ್ರಾಮದಂಚಿನಲ್ಲಿ ವಿವಾದಕ್ಕೆ ಈಡಾಗಿರುವ ಗಣಿಗಾರಿಕೆ ವಿಚಾರದಲ್ಲಿ ಈ ಭಾಗದಲ್ಲಿ ೨೦೦ ಮೀ ವ್ಯಾಪ್ತಿಯಲ್ಲಿರುವ ವಸತಿ, ಗದ್ದೆ, ಕಾಫಿ ತೋಟಗಳ ಮರು ಸರ್ವೆ ನಡೆಸಿ ವರದಿ ಬಂದ ಬಳಿಕ ಗಣಿಗಾರಿಕೆ ಮುಂದುವರಿಕೆ ಅಥವಾ ನಿಲುಗಡೆ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಅಲ್ಲಿಯವರೆಗೆ ಗಣಿಗಾರಿಕೆ ನಡೆಸದಂತೆ ಪರವಾನಿಗೆದಾರ ವೇಣುಗೋಪಾಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಸಂದೀಪ್ ಸೂಚನೆ ನೀಡಿದ್ದಾರೆ.

ಅರಮೇರಿ ಹಾಗೂ ಕಡಂಗಮರೂರು ವ್ಯಾಪ್ತಿಯಲ್ಲಿ ಗಣಿಗಾರಿಕೆಯ ವಿವಾದ ಪಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ನೀಡಿದರೂ ಸಭೆ ನಡೆಸದೇ ಇದ್ದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದಿಢೀರನೇ ಗ್ರಾಮಸ್ಥರ ಸಭೆಯನ್ನು ಕಡಂಗಮರೂರು ಗ್ರಾಮದ ಮಹಿಳಾ ಸಮಾಜ ಸಭಾಂಗಣದಲ್ಲಿs ನಡೆಸಿತು. ಗ್ರಾಮಸ್ಥರು ಈ ವಿಚಾರವಾಗಿ ಮಾತನಾಡುವಾಗ ಗಣಿಗಾರಿಕೆದಾರನ ಕಡೆಯಿಂದ ಉಪ ಗುತ್ತಿಗೆ ಪಡೆದವರು ಸಭೆಯಲ್ಲಿ ಮಾತಿನ ಚಕಮಕಿ ಮತ್ತು ವಾಗ್ವಾದ ತೀವ್ರವಾಗಿತ್ತು. ಇತ್ತೀಚೆಗೆ ಕಂದಾಯ ಪರಿವೀಕ್ಷಕರು ಸ್ಥಳಕ್ಕೆ ಬಂದಾಗಲೂ, ಗುತ್ತಿಗೆದಾರರಿಂದಾಗಿ ಆರೋಪ ಪ್ರತ್ಯಾರೋಪದಿಂದ ಸಭೆಯಲ್ಲಿ ಬಿಗುವಿನ ವಾತವಾರಣ ಕಂಡುಬAದಾಗ ಪೊಲೀಸರು ಮಧ್ಯಪ್ರವೇಶ ಮಾಡಿದ್ದು ಗಮನಾರ್ಹವಾಗಿತ್ತು. ಈ ಗೊಂದಲಗಳ ನಡುವೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದಾಗ ಮತ್ತೆ ಗ್ರಾಮಸ್ಥರು ಅವರನ್ನು ಕರೆತಂದು ಈ ಕುರಿತು ಸ್ಪಷ್ಟ ನಿಲುವು ಏನೆಂದು ತಿಳಿಸಿ ಎಂದು ಆಗ್ರಹಿಸಿದರು.

ಗ್ರಾಮ ನಿವಾಸಿ, ನಿವೃತ್ತ ಶಿಕ್ಷಕ ಗೋವಿಂದರಾಜು ಮಾತನಾಡಿ, ಈ ಗಣಿಗಾರಿಕೆ ಸ್ಥಳದ ೫೦ ರಿಂದ ೧೦೦ ಮೀ. ಒಳಗೆ ಹಲವು ಮನೆಗಳು ಇದ್ದು ಕಾಫಿ ತೋಟ, ಗದ್ದೆ ಇದೆ. ಇದರಿಂದ ಗ್ರಾಮದ ನೆಲ, ಜಲ, ಕೃಷಿ ಎಲ್ಲದಕ್ಕೂ ಅಪಾಯ ಇದ್ದು ಗಣಿಗಾರಿಕೆಗೆ ಪರವಾನಿಗೆ ನೀಡಿದ್ದು ತಪ್ಪು ಎಂದರಲ್ಲದೆ ಅದನ್ನು ಹಿಂಪಡೆಯಲು ಆಗ್ರಹಿಸಿದರು. ಕೋದಂಡ ಸುರ ಅಯ್ಯಪ್ಪ ಇದಕ್ಕೆ ಪೂರಕವಾಗಿ ಮಾತನಾಡಿ, ಈ ಭಾಗದಲ್ಲಿ ಗಣಿಗಾರಿಕೆ ಆರಂಭಿಸಿದರಿAದ ಮಣ್ಣು ಹರಿದು ಪಕ್ಕದಲ್ಲಿರುವ ಕರೆ ಭಾಗಶಃ ಮುಚ್ಚುತ್ತಿದೆ. ಸ್ಫೋಟದ ತೀವ್ರತೆಗೆ ಮನೆ ಮಾತ್ರವಲ್ಲದೆ ನೀರಿನ ಹರಿವಿನ ನಾಳಗಳ ಬದಲಾವಣೆಗೊಂಡು ಸುತ್ತಲಿನ ಕುಡಿಯುವ ನೀರಿನ ಸೆಲೆಗಳು ಬತ್ತಲಿವೆ. ಇಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸ್ವಂದಿಸದೆ ಇರುವುದು ಸರಿಯಲ್ಲ. ಇನ್ನಾದರೂ ಪರವಾನಿಗೆ ನೀಡಿದ್ದನ್ನು ರದ್ದುಪಡಿಸುವಂತೆ ಗಣಿಗಾರಿಕೆ ಸಂಬAಧ ಹಿಂದೆ ನಡೆಸಿದ ಆಂತರಿಕ ಸರ್ವೆ ನಕಾಶೆ ವರದಿಗಳನ್ನು ಸಾಬೀತುಪಡಿಸುವಂತೆ ಆಗ್ರಹಿಸಿದರು.

ಹಿರಿಯ ಭೂ ವಿಜ್ಞಾನಿ ಸಂದೀಪ್, ಸಭೆಯಲ್ಲಿದ್ದ ಪರವಾನಿಗೆ ಪಡೆದ ವೇಣುಗೋಪಾಲ್ ಅವರಿಗೆ ಗಣಿಗಾರಿಕೆಯನ್ನು ನಿಯಮ ಮೀರಿ ನಡೆಸಿದ್ದೀರ. ಉಪ ಗುತ್ತಿಗೆ ನೀಡಿರುವುದು ನಿಯಮಬಾಹಿರ, ನಿಮ್ಮ ಪರವಾನಿಗೆ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಸಿ ಉಪಗುತ್ತಿಗೆ ಮಾತನಾಡುವುದು ಸೂಕ್ತವಲ್ಲ ಎಂದರು.

ಸಭೆಯಲ್ಲಿ ಕಂದಾಯ ಪರಿವೀಕ್ಷಕ ಹರೀಶ್, ಹೆಚ್ಚುವರಿ ತಹಶೀಲ್ದಾರ್ ಪ್ರದೀಪ್ ಕುಮಾರ್, ಅರಮೇರಿ ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಮಂಜುಳ, ಸಹಾಯಕ ಭೂ ವಿಜ್ಞಾನ ಅಧಿಕಾರಿ ರಾಹುಲ್, ಬಲ್ಲಟಿಕಾಳಂಡ ಮುದ್ದಣ್ಣ ಮತ್ತು ಮಾದಪ್ಪ, ಪೋಳಂಡ ಮಾಚಯ್ಯ ಮತ್ತು ಪೂಣಚ್ಚ, ಮಂಜುಳಾ ಅಯ್ಯಪ್ಪ, ಬಲ್ಯಂಡ ಉದಯ ಪಾಲ್ಗೊಂಡಿದ್ದರು.