ಗೋಣಿಕೊಪ್ಪಲು, ಜು. ೨: ಸಾಲು ಮರದ ತಿಮ್ಮಕ್ಕ ಹುಟ್ಟುಹಬ್ಬದ ಅಂಗವಾಗಿ ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಗೋಣಿಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಣ್ಣು ಹಾಗೂ ಔಷಧೀಯ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಣಿಕೊಪ್ಪಲು ಗ್ರಾಮ ಪಂಚಾಯತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರು ಹಣ್ಣಿನ ಗಿಡ ಹಾಗೂ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪೊಮ್ಮಕ್ಕಡ ಕೂಟದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದ್ದು, ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ತಳಿಯ ಹಣ್ಣು ಹಂಪಲು ಹಾಗೂ ಔಷಧೀಯ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ತೋರುತ್ತಿರುವುದು ಪ್ರಶಂಸನೀಯ ಎಂದರು.
ಕಾವೇರಿ ಪೋಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾವೇರಿ ಮೊಮ್ಮಕ್ಕಡ ಕೂಟ ಎಂಬ ಸಂಘವನ್ನು ಸ್ಥಾಪಿಸಿ, ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಸಂಘದಲ್ಲಿ ಸುಮಾರು ೨೦೦ ಕೊಡವ ಕುಟುಂಬಗಳ ಮಹಿಳೆಯರು ಸದಸ್ಯರಾಗಿದ್ದು, ಸ್ವಚ್ಛ ಭಾರತ ಅಭಿಯಾನದಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಸಚ್ಛತೆಗೆ ಆದ್ಯತೆ ನೀಡಲಾಗಿದೆ. ಸರಕಾರಿ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಗಿದೆ. ಇದಕ್ಕೆ ಸಾಲುಮರದ ತಿಮ್ಮಕ್ಕ ಅವರೇ ಸ್ಪೂರ್ತಿಯಾಗಿದ್ದು, ಈ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬದ ನೆನಪಿಗೋಸ್ಕರ ಗೋಣಿಕೊಪ್ಪ ಸರಕಾರಿ ಶಾಲೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅವರು ಮಾತನಾಡಿ, ಅನ್ನ ನೀರಿನಷ್ಟೇ ಪ್ರಾಮುಖ್ಯತೆಯನ್ನು ನೆರಳು ಕೂಡ ಹೊಂದಿದೆ ನೆರಳಿನ ಪ್ರಾಮುಖ್ಯತೆ ಎಷ್ಟಿದೆ ಎನ್ನುವುದನ್ನು ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಹಾಗೂ ಸದಸ್ಯರು, ತೋರಿದ್ದಾರೆ ಎಂದರು.
ಗೋಣಿಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಬಿ.ಎನ್. ಪ್ರಕಾಶ್ ಅವರು ಮಾತನಾಡಿ, ಪರಿಸರವೇ ನಮ್ಮ ಬದುಕು ಪರಿಸರ ಇಲ್ಲದಿದ್ದಲ್ಲಿ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ, ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದರು
ಕಾವೇರಿ ಪೋಮ್ಮಕ್ಕಡ ಕೊಟದ ಅಧ್ಯಕ್ಷೆ ವಿಜು ದೇವಯ್ಯ ಮುಂದಾಳತ್ವದಲ್ಲಿ ಕಾರ್ಯದರ್ಶಿ ಮುಕ್ಕಾಟೀರ ಬೀನಾ ಪ್ರಸನ್ನ, ಖಜಾಂಚಿ ಪರದಂಡ ಸುಮಿ ಬೋಪಣ್ಣ, ನಿರ್ದೇಶಕರಾದ ಅಪ್ಪಟ್ಟಿರ ಸೌಮ್ಯ ಮೊಣ್ಣಪ್ಪ, ಸಣ್ಣುವಂಡ ಡಯಾನಾ ಅಯ್ಯಪ್ಪ, ಬಲ್ಯಮಿದೇರಿರ ಆಶಾ ಶಂಕರ್ , ಕಾಳಮಂಡ ನಯನ ಜಗತ್, ಪೂದ್ರಿಮಾಡ ಸರಿತ ತಮ್ಮಯ್ಯ, ಸದಸ್ಯರಾದ ಬೊಳ್ಳಜೀರ ಸುಶೀಲ ಅಶೋಕ್, ಮನ್ನೇರ ರಮ್ಯಾ, ನೂರೇರ ರತಿ ಅಚ್ಚಪ್ಪ , ಅಚ್ಚಕಾಳೇರ ಫೇಮಿನಾ, ಪಾರುವಂಗಡ ರೋಷನಿ, ಪ್ರಮೋದ್ ಕಾಮತ್, ಶಾಲಾ ಮುಖ್ಯೋಪಾದಾಯರಾದ ಕುಮಾರ್ ಹಾಗೂ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗೋಣಿಕೊಪ್ಪ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮತ್ತಿತರರು ಇದ್ದರು