ಮಡಿಕೇರಿ, ಜು. ೧: ಸತ್ಯ, ಧರ್ಮ ಮತ್ತು ನ್ಯಾಯ ಎಂಬ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದುದ್ದಕ್ಕೂ ಪಾಲಿಸಬೇಕು. ಯಾವುದೇ ಸಂದರ್ಭದಲ್ಲೂ ಪಕ್ಷಪಾತ ಮಾಡದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಕೊಡಗು ವಿದ್ಯಾಲಯದ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭದಲ್ಲಿ ಅವರು ನೂತನ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಅಧಿಕಾರದ ಬ್ಯಾಡ್ಜ್ಗಳನ್ನು ವಿತರಿಸಿ ಪದಗ್ರಹಣ ಬೋಧಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ತತ್ವಗಳನ್ನು ಉಲ್ಲೇಖಿಸಿದ ಅವರು, ಕೊಡಗಿನ ಇತಿಹಾಸ, ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳ ಪರಿಚಯ, ದೈಹಿಕ ವ್ಯಾಯಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಹಾಗೂ ನಾಯಕತ್ವ ಗುಣಗಳೊಂದಿಗೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ನಿರಂಜನ್ ಎನ್., ಶಾಲಾ ನಾಯಕಿ ಲಕ್ಷö್ಯ ಪೊನ್ನಕ್ಕ, ಸಹ ಶಾಲಾ ನಾಯಕ ಆದಿತ್ಯ ಕೆ.ಎಂ., ಸಾಂಸ್ಕೃತಿಕ ನಾಯಕಿ ಶ್ರೀಯ ಕಿರಣ್, ಸಹ ಸಾಂಸ್ಕೃತಿಕ ನಾಯಕಿ ತೃಪ್ತಿ ಟಿ.ಎನ್., ಕ್ರೀಡಾ ನಾಯಕಿ ತೇಜಲ್, ಸಹ ಕ್ರೀಡಾ ನಾಯಕ ದೇವೃತ್ ಟಿ.ಬಿ. ಸೇರಿದಂತೆ ವಿವಿಧ ಗುಂಪುಗಳ ನಾಯಕರಿಗೆ ಅಧಿಕಾರದ ಚಿಹ್ನೆಗಳನ್ನು ಪ್ರದಾನ ಮಾಡಲಾಯಿತು.

ಪ್ರಾಥಮಿಕ ವಿಭಾಗದ ಶಾಲಾ ನಾಯಕ ಮನೀಶ್ ರೈ, ಶಾಲಾ ನಾಯಕಿ ಅಮೃತ ನೀಲಮ್ಮ, ಸಾಂಸ್ಕೃತಿಕ ನಾಯಕಿ ಮೋನಿಷಾ, ಕ್ರೀಡಾ ನಾಯಕ ಕೆವಿನ್ ಕಾರ್ಯಪ್ಪ ಸಿ.ಎಸ್. ಹಾಗೂ ವಿವಿಧ ಗುಂಪುಗಳ ನಾಯಕರಿಗೂ ಅಧಿಕಾರದ ಬ್ಯಾಡ್ಜ್ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟಿçÃಯ ಪುಸ್ತಕ ವಾಚನ ದಿನ ಅಂಗವಾಗಿ ಶಾಲಾ ನಾಯಕಿ ಲಕ್ಷö್ಯ ಪೊನ್ನಕ್ಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಸದಸ್ಯ ಗುರುದತ್ ಸಿ.ಎಸ್., ಆಡಳಿತ ಸಮಿತಿಯ ಮಾಜಿ ಸದಸ್ಯ ಪ್ರೇಮನಾಥ್, ಪ್ರಾಂಶುಪಾಲೆ ಸುಮಿತ್ರ ಕೆ.ಎಸ್., ಆಡಳಿತ ಮುಖ್ಯಸ್ಥ ರವಿ ಪಿ., ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆದಿತ್ಯ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ನಮೃತ ಸ್ವಾಗತಿಸಿದರು, ಖುಷಿ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಗುರುಪ್ರೀತ್ ವಂದಿಸಿದರು.