ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಜು. ೧: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಹುತೇಕ ಕ್ರೀಡಾಕೂಟಗಳು ಮುಗಿದಿವೆ. ಇದೀಗ ಮೈಸೂರಿನಲ್ಲಿ ತಾ. ೩ ರಿಂದ (ನಾಳೆಯಿಂದ) ಕೊಡವರ ಮತ್ತೊಂದು ಹಾಕಿ ಹಬ್ಬ ಆರಂಭಗೊಳ್ಳಲಿದ್ದು, ಮೂರು ದಿನಗಳ ಕಾಲ ಹಾಕಿಪ್ರಿಯರಿಗೆ ರಸದೌತಣ ನೀಡಲಿದೆ. ದೇಶದಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುವ ಹಾಕಿ ಇಂಡಿಯಾ ಪ್ರೀಮಿಯರ್ ಲೀಗ್ ಹೊರತುಪಡಿಸಿದರೆ ಫ್ರಾö್ಯಂಚೈಸಿಗಳ ನಡುವಿನ ಪ್ರತಿಷ್ಠಿತ ಪಂದ್ಯಾಟವಾಗಿ ಕಳೆದ ವರ್ಷದಿಂದ ಮೈಸೂರು ಕೊಡವ ಸಮಾಜ ಯೂತ್ ವಿಂಗ್, ಮೈಸೂರು ಕೊಡವ ಸಮಾಜದ ಸಹಯೋಗದೊಂದಿಗೆ ಹಾಗೂ ಹಾಕಿ ಮೈಸೂರಿನ ಸಹಕಾರದೊಂದಿಗೆ ಈ ಪಂದ್ಯಾಟವನ್ನು ಪ್ರಾರಂಭಿಸಿದ್ದು, ಕಳೆದ ವರ್ಷ ಕೊಡಗು ಸೇರಿದಂತೆ ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಅಧಿಕ ಹಾಕಿ ಅಭಿಮಾನಿಗಳ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಕಂಡಿತ್ತು.

ಇದೀಗ ಕೊಡವ ಹಾಕಿ ಪ್ರೀಮಿಯರ್ ಲೀಗ್‌ನ (ಕೆಎಚ್‌ಪಿಎಲ್) ಎರಡನೇ ಆವೃತ್ತಿಯ ಪಂದ್ಯಾಟ ಜುಲೈ ೩ ರಿಂದ ೫ ರ ತನಕ ಮೈಸೂರಿನ ಚಾಮುಂಡಿ ವಿಹಾರ್ ಟರ್ಫ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

ಎರಡನೆಯ ಆವೃತ್ತಿಯಲ್ಲೂ ೧೦ ಫ್ರಾö್ಯಂಚೈಸಿಗಳ ತಂಡಗಳು ಪಾಲ್ಗೊಳ್ಳುತ್ತಿವೆ. ಹಲವರು ಒಟ್ಟಾಗಿ ತಂಡಗಳನ್ನು ಖರೀದಿಸಿದ್ದು, ಬಿಡ್ಡಿಂಗ್ ಮೂಲಕ ಆಟಗಾರರನ್ನು ಆಯ್ಕೆಮಾಡಿಕೊಂಡಿದ್ದಾರೆ. ಈ ಬಾರಿಯ ಬಿಡ್ಡಿಂಗ್‌ನಲ್ಲಿ ಸುಮಾರು ೨೭೦ರಷ್ಟು ಆಟಗಾರರು ಪಾಲ್ಗೊಂಡಿದ್ದು ಅಂತಿಮವಾಗಿ ೧೭೦ ಆಟಗಾರರನ್ನು ವಿವಿಧ ೪ಮೂರನೇ ಪುಟಕ್ಕೆ

(ಮೊದಲ ಪುಟದಿಂದ) ಫ್ರಾö್ಯಂಚೈಸಿಗಳು ಆಯ್ಕೆಮಾಡಿಕೊಂಡಿವೆ.

ಈ ಪಂದ್ಯಾವಳಿ ಆಲ್ಫಾ ಹಾಕಿ, ಐಟೀಸ್, ಕಾಲ್ಗೊ, ಯುನಿಬಿಕ್, ಇಬಿಸ್ ಸ್ಟೆöÊಲ್ಸ್ನಂತಹ ಸಂಸ್ಥೆಗಳು ಪ್ರಾಯೋಜಕತ್ವ, ಸಹಕಾರ ನೀಡುತ್ತಿವೆ. ವೃತ್ತಿಪರ ಹಾಕಿ ಆಟಗಾರರು, ಹವ್ಯಾಸಿ ಹಾಕಿ ಆಟಗಾರರು ಸೇರಿದಂತೆ ಖ್ಯಾತನಾಮ ಹಾಕಿಪಟುಗಳು ವಿವಿಧ ತಂಡಗಳ ಪರ ಆಡಲಿದ್ದಾರೆ. ಫ್ರಾö್ಯಂಚೈಸಿಗಳೂ ಈ ಪಂದ್ಯಾವಳಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಕೊಡಗು ಸೇರಿದಂತೆ ಮೈಸೂರು, ಬೆಂಗಳೂರಿನ ಕಡೆಯವರು ತಂಡಗಳ ಮಾಲೀಕರಾಗಿ ಮುಂದೆ ಬಂದಿದ್ದಾರೆ.

ಮಾಲೀಕರು ಸೇರಿದಂತೆ ಪ್ರತಿಷ್ಠಿತ ಕೋಚ್‌ಗಳು, ವ್ಯವಸ್ಥಾಪಕರನ್ನು ವಿವಿಧ ತಂಡಗಳು ಹೊಂದಿದ್ದು, ಕೆಎಚ್‌ಪಿಎಲ್ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವುದು ವಿಶೇಷವಾಗಿದೆ.

ವಿಜೇತರಿಗೆ ರೂ. ೧.೫೦ ಲಕ್ಷ

ಕೆಎಚ್‌ಪಿಎಲ್ ವಿಜೇತ ತಂಡ ರೂ. ೧ .೫೦ಲಕ್ಷ ನಗದು ಹಾಗೂ ಟ್ರೋಫಿ ಪಡೆಯಲಿದೆ. ರನ್ನರ್ಸ್ ತಂಡ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ ಗಳಿಸಲಿದ್ದರೆ. ದ್ವಿತೀಯ ರನ್ನರ್ ಅಪ್ (ಮೂರನೇ ಸ್ಥಾನ) ತಂಡ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಗಳಿಸಲಿದೆ.

೧೮ರ ವಯೋಮಿತಿ ಮಹಿಳಾ ಆಟಗಾರ್ತಿ

ಪ್ರತಿತಂಡದಲ್ಲಿ ೧೮ರ ವಯೋಮಿತಿಯೊಳಗಿನ ಇಬ್ಬರು ಆಟಗಾರರು (ಕನಿಷ್ಟ) ಇರಲೇಬೇಕು. ಹಾಗೂ ಪ್ರತಿ ತಂಡದಲ್ಲಿ ಓರ್ವ ಮಹಿಳಾ ಆಟಗಾರ್ತಿ ಕಡ್ಡಾಯ ಎಂಬ ನಿಯಮ ಮಾಡಲಾಗಿದೆ. ಇದರಂತೆ ತಂಡಗಳ ಆಯ್ಕೆಯೂ ನಡೆದಿವೆ.

೧೦ ಸಾವಿರ ಜನರ ನಿರೀಕ್ಷೆ

ಕಳೆದ ವರ್ಷ ನಡೆದ ಪಂದ್ಯಾವಳಿಯಲ್ಲಿ ಸುಮಾರು ೮ ಸಾವಿರ ಮಂದಿ ಪ್ರೇಕ್ಷಕರು ಪಾಲ್ಗೊಂಡಿದ್ದು, ಈ ಬಾರಿ ೧೦ ಸಾವಿರದಷ್ಟು ಕ್ರೀಡಾಭಿಮಾನಿಗಳನ್ನು ನಿರೀಕ್ಷೆ ಮಾಡಿರುವುದಾಗಿ ಕೊಡವ ಸಮಾಜ ಯೂತ್ ವಿಂಗ್‌ನ ಪ್ರಮುಖರು ಹೇಳಿದ್ದಾರೆ.

ಅತಿಥಿಗಳು

ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗಿನ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ಶಾಸಕ ಹರೀಶ್ ಗೌಡ, ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷಿö್ಮಕಾಂತ್ ರೆಡ್ಡಿ, ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಮಾಳೇಟಿರ ಸುಬ್ಬಯ್ಯ, ಕೊಡವ ಸಮಾಜದ ಅಧ್ಯಕ್ಷ ಪೊಂಜAಡ ಗಣಪತಿ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಹಾಕಿ ಮೈಸೂರು ಪ್ರಮುಖರಾದ ಡಾ. ಮಾತಂಡ ಅಯ್ಯಪ್ಪ, ಸ್ಕೀಯಿಂಗ್‌ಪಟು ತೆಕ್ಕಡ ಭವಾನಿ ನಂಜುAಡ, ಉದ್ಯಮಿ ಬಲ್ಲಚಂಡ ದೀಪ್ತಿ ಬೋಪಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿ ಸಂದರ್ಭ ಕೊಡಗಿನ ವಾಲಗ ತಂಡ, ದುಡಿಕೊಟ್ಟ್ ಪಾಟ್, ಸಾಂಸ್ಕೃತಿಕ ಕಾರ್ಯಕ್ರಮವೂ ಆಕರ್ಷಣೆಯಾಗಿರುತ್ತದೆ ಎಂದು ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಹಂಚೆಟ್ಟಿರ ವರುಣ್ ನಂಜಪ್ಪ, ಕಾರ್ಯದರ್ಶಿ ಕಡೇಮಾಡ ಸುವಿತ್ ಸೋಮಣ್ಣ ತಿಳಿಸಿದ್ದಾರೆ.