ಮಡಿಕೇರಿ, ಜು. ೧; ಸರಕಾರದ ಅನುಮತಿಯಿಲ್ಲದೆ ಹೋಂ ಸ್ಟೇ ಒಂದರಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಕೊಡಗು ಪೊಲೀಸರು; ಈ ಸಂಬAಧ ೨೮ ಮಂದಿಯನ್ನು ಬಂದಿಸಿ, ರೂ. ೧೧ ಲಕ್ಷಕ್ಕೂ ಅಧಿಕ ನಗದು, ವಾಹನಗಳು, ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಗದಾಳು ಗ್ರಾಮದ ಮಡಿಲು ಹೋಂ ಸ್ಟೇನಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಇಂದು ಮಧ್ಯಾಹ್ನ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಮೂಲದ ವ್ಯಕ್ತಿಗಳು ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದುದು ಕಂಡುಬAದಿದ್ದು, ಆಡುತ್ತಿದ್ದವರನ್ನು ಬಂದಿಸಲಾಗಿದೆ.
ನಗದು-ವಾಹನಗಳ ವಶ
ಜೂಜಾಟ ಆಡುತ್ತಿದ್ದ ೨೮ ಮಂದಿಯನ್ನು ಬಂದಿಸಿರುವ ಪೊಲೀಸರು, ಪಣಕಿಟ್ಟಿದ್ದ ರೂ.೧೧,೦೮,೧೩೦ ನಗದು ಸೇರಿದಂತೆ ಐದು ಕಾರುಗಳು, ಒಂದು ದ್ವಿಚಕ್ರ ವಾಹನ ಹಾಗೂ ೩೫ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.
ಮಡಿಕೇರಿ ಉಪ ವಿಭಾಗದ ಅಪರಾಧ ಪತ್ತೆ ವಿಶೇಷ ತಂಡದ ಅಧಿಕಾರಿ ಡಿವೈಎಸ್ಪಿ ಪಿ.ಎ. ಸೂರಜ್, ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಅಪರಾಧ ಪತ್ತೆ ವಿಶೇಷ ತಂಡದ ಅಧಿಕಾರಿ, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದವರನ್ನು ಬಂದಿಸಿದ್ದು, ಬಂದಿತರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.