ಸಿದ್ದಾಪುರ, ಜು. ೧: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಕಸ ಸಾಗಾಟ ಮಾಡುತ್ತಿದ್ದ ವಾಹನ ಡಿಕ್ಕಿಯಾದ ಹಿನ್ನೆಲೆಯಲ್ಲಿ ಎರಡು ಕಾರುಗಳು ಜಖಂಗೊAಡಿರುವ ಘಟನೆ ಬಾಡಗ -ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಸಂಭವಿಸಿದೆ.

ಹೊರಜಿಲ್ಲೆಗಳಿಂದ ಕಸ ಹಾಗೂ ತ್ಯಾಜ್ಯಗಳನ್ನು ಸಾಗಾಟ ಮಾಡಿ ಗೋಣಿಕೊಪ್ಪಲುವಿನಿಂದ ಹುಂಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ತಡರಾತ್ರಿ ಹುಂಡಿ ಪಟ್ಟಣದ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಹುಂಡಿ ನಿವಾಸಿಯಾಗಿರುವ ಸೇಕೀರ್ ಎಂಬವರಿಗೆ ಸೇರಿದ ಮಾರುತಿ ೮೦೦ ಕಾರನ್ನು ಮನೆಯ ಎದುರು ನಿಲ್ಲಿಸಿದ್ದರು. ಇದಲ್ಲದೆ ಇವರ ನೆರೆಮನೆಯ ನಿವಾಸಿ ಮೊಹಮ್ಮದ್ ಅಫ್ಸಲ್ ಕೂಡ ಅವರಿಗೆ ಸೇರಿದ ಡಸ್ಟರ್ ಕಾರ್ ಅನ್ನು ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಮದುವೆ ಕಾರ್ಯಕ್ಕೆ ತೆರಳಿದ್ದರು. ತಡರಾತ್ರಿ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಈ ಎರಡು ಕಾರ್‌ಗಳಿಗೆ ಡಿಕ್ಕಿಪಡಿಸಿರುವುದಾಗಿ ಕಾರಿನ ಮಾಲೀಕ ಸೇಕೀರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎರಡೂ ಕಾರುಗಳು ಜಖಂಗೊAಡಿದ್ದು, ಕಾರುಗಳಿಗೆ ಡಿಕ್ಕಿ ಪಡಿಸಿದ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸಮೀಪದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಿ.ಸಿ. ಕ್ಯಾಮರಗಳನ್ನು ಪರಿಶೀಲಿಸಿದ ಸಂದರ್ಭ ಕಸ ತ್ಯಾಜ್ಯಗಳನ್ನು ಸಾಗಾಟ ಮಾಡುತ್ತಿರುವ ವಾಹನ ಡಿಕ್ಕಿಪಡಿಸಿರುವುದು ಖಾತರಿಯಾಗಿದೆ.