ವೀರಾಜಪೇಟೆ, ಜು. ೧: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ರಾದ ಚಂದ್ರಶೇಖರ್ ಎ. ವಹಿಸಿದ್ದರು. ಶಿಕ್ಷಕರಾದ ಪ್ರತೀಕ ಅವರು ಉದ್ಘಾಟನಾ ಭಾಷಣ ಮಾಡಿದರು. ಶಿಕ್ಷಕ ತಮ್ಮಯ್ಯ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಅಗತ್ಯತೆ ಬಗ್ಗೆ ತಿಳಿಸಿದರು.
ಶಿಕ್ಷಕರಾದ ಡಾ. ಮದನ್ ಚುನಾಯಿತ ಪ್ರತಿನಿಧಿಗಳ ಕರ್ತವ್ಯವೇನೆಂದು ಮಾಹಿತಿಯಿತ್ತರು. ನಸೀಮಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ಕಿರಣ್‌ಕುಮಾರ್, ಅನಿತಾನೊರೊನ್ಹಾ, ರಂಜಿನಿ ಉಪಸ್ಥಿತರಿದ್ದರು. ಆಯಿಷಾ ನಿರೂಪಿಸಿ, ವಿದ್ಯಾರ್ಥಿಗಳಾದ ಮಹೇಂದ್ರ ಸ್ವಾಗತಿಸಿ, ಸುಭಾಷ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.