ಮಡಿಕೇರಿ, ಜೂ. ೨೯: ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ಜಿಲ್ಲೆಯ ಯುವತಿ ತೀತರಮಾಡ ಸಿಂಚಲ್ ಕಾವೇರಮ್ಮ ಹಾಗೂ ಬಲ್ಯಮೀದೇರಿರ ಆರ್ಯನ್ ಪ್ರಜ್ವಲ್ ಕಶ್ಯಪ್ ಸೆಕೆಂಡ್ ಲೆಕ್ಕದಲ್ಲಿ ವಂಚಿತರಾಗಿದ್ದು, ನಿರಾಶೆ ಅನುಭವಿಸುವಂತಾಗಿದೆ.

ಭುವನೇಶ್ವರದಲ್ಲಿ ನಡೆದ ೬೫ನೇ ಸೀನಿಯರ್ ಅಂತರರಾಜ್ಯ ರಾಷ್ಟಿçÃಯ ಚಾಂಪಿಯನ್‌ಶಿಪ್‌ನ ೪೦೦ ಮೀಟರ್ ಹರ್ಡಲ್ಸ್ನಲ್ಲಿ ಸ್ಪರ್ಧಿಸಿದ್ದ ಸಿಂಚಲ್ ೫೮.೯ ಸೆಕೆಂಡ್‌ನಲ್ಲಿ ಗುರಿ ತಲುಪಿದರಾದರೂ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಏಷ್ಯನ್ ಗೇಮ್ಸ್ ಅರ್ಹತೆಗೆ ೫೭.೨೧ ಸೆಕೆಂಡ್‌ನ ಗುರಿ ನಿಗದಿ ಮಾಡಲಾಗಿತ್ತು. ೧.೬ ಮಿಲಿ ಸೆಕೆಂಡ್ ಹೆಚ್ಚಾದ ಹಿನ್ನೆಲೆ ಇವರು ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಈ ಸ್ಪರ್ಧೆಯಲ್ಲಿ ಇವರು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇದರೊಂದಿಗೆ ೪x೪೦೦ ರಿಲೇಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸಿಂಚಲ್ ಬೆಳ್ಳಿಯ ಪದಕ ಗಳಿಸಿದ್ದಾರೆ. ಇದೇ ಮೈದಾನದಲ್ಲಿ ಈ ಹಿಂದೆ ನಡೆದ ೨೦೨೩ರ ಏಷ್ಯನ್ ಗೇಮ್ಸ್ಗೆ ಇವರು ಅರ್ಹತೆ ಪಡೆದಿದ್ದರು.

ಆರೋಗ್ಯದಲ್ಲಿ ಏರು-ಪೇರಾದ ಹಿನ್ನೆಲೆ ಎರಡನೆ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶ ಕೈ ತಪ್ಪಿದ್ದಾಗಿ ಸಿಂಚಲ್ “ಶಕ್ತಿ''ಯೊಂದಿಗೆ ಬೇಸರ ವ್ಯಕ್ತಪಡಿಸಿದರು. ಇವರು ಜಿಲ್ಲೆಯ ನಲ್ಲೂರು ಗ್ರಾಮದ ನಿವಾಸಿ ತೀತರಮಾಡ ರವಿ ಹಾಗೂ ರಶ್ಮಿ (ತಾಮನೆ : ಕುಪ್ಪಂಡ) ದಂಪತಿಯ ಪುತ್ರಿ.

ಆರ್ಯನ್‌ಗೂ ಕೈ ತಪ್ಪಿದ ಅವಕಾಶ

ಏಷ್ಯನ್ ಗೇಮ್ಸ್ನ ಅವಕಾಶದಿಂದ ಜಿಲ್ಲೆಯ ಮತ್ತೋರ್ವ ಯುವಕ ಬಲ್ಯಮೀದೇರಿರ ಆರ್ಯನ್ ಪ್ರಜ್ವಲ್ ಕಶ್ಯಪ್ ಕೂಡ ಅವಕಾಶ ವಂಚಿತರಾಗಿದ್ದಾರೆ. ಭುವನೇಶ್ವರದಲ್ಲಿ ನಡೆದ ೬೫ನೇ ಸೀನಿಯರ್ ಅಂತರರಾಜ್ಯ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಆರ್ಯನ್ ಪ್ರಜ್ವಲ್ ಕಶ್ಯಪ್ ಸಹ ೪೦೦ ಮೀಟರ್ ಹರ್ಡಲ್ಸ್ನಲ್ಲಿ ಕಂಚು, ೪x೪೦೦ ಮೀಟರ್ ರಿಲೇಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕಗಳಿಸಿದ್ದಾರೆ.

ಏಷ್ಯನ್ ಗೇಮ್ಸ್ನ ಅರ್ಹತೆಗೆ ಬಾಲಕರ ವಿಭಾಗದಲ್ಲಿ ೪೦೦ ಮೀಟರ್ ಹರ್ಡಲ್ಸ್ನಲ್ಲಿ ೪೯.೪೦ ಸೆಕೆಂಡ್‌ನ ಗುರಿ ನಿಗದಿ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಆರ್ಯನ್ ೫೦.೯ ಸಕೆಂಡ್‌ನಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದರಾದರೂ ಏಷ್ಯನ್ ಗೇಮ್ಸ್ ಅವಕಾಶ ವಂಚಿತರಾದರು. ಇವರು ಸ್ಪರ್ಧಿಸಿದ ೪x೪೦೦ ಮೀಟರ್ ರಿಲೇಯಲ್ಲಿ ರಾಜ್ಯ ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ.

ಇವರು ಮೂಲತಃ ಬಾಡಗರಕೇರಿ ಪೊರಾಡು ಗ್ರಾಮದ ನಿವಾಸಿ ಬಲ್ಯಮೀದೇರಿರ ಜೋಯಪ್ಪ ನಂದ ಹಾಗೂ ಸರೋಜ (ತಾಮನೆ : ಚೆನಿಯಪಂಡ ಮಾಜಿ ರಾಷ್ಟಿçÃಯ ಕ್ರೀಡಾಪಟು) ದಂಪತಿಯ ಪುತ್ರ. ಪ್ರಸ್ತುತ ಬಳ್ಳಾರಿಯ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

-ಶಶಿv