ಸಿದ್ದಾಪುರ, ಜೂ. ೨೯: ಯಾರು ಇಲ್ಲದೆ ಒಂಟಿಯಾಗಿ ತಿರುಗಾಡುತ್ತಿದ್ದ ವಯಸ್ಸಾದ ಮಹಿಳೆಯನ್ನು ಸಿದ್ದಾಪುರದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಪೊಲೀಸರ ಮೂಲಕ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು. ಸಿದ್ದಾಪುರ ಪಟ್ಟಣದ ಸುತ್ತಮುತ್ತಲಿನಲ್ಲಿ ಸುತ್ತಾಡುತ್ತಿದ್ದ ಮಹಿಳೆಯನ್ನು ಕಂಡ ಸಿದ್ದಾಪುರದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಈ ವಿಚಾರವನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿ ನಂತರ ಮಹಿಳೆಯನ್ನು ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ಕರೆÀೆÆಯ್ದು ಆಶ್ರಮದಲ್ಲಿ ಆಶ್ರಯ ಪಡೆಯಲು ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಎಂ.ಎ. ಯಮುನಾ, ತುಳಸಿ, ಸುಮತಿ ಹಾಜರಿದ್ದರು.