ಗುಡ್ಡೆಹೊಸೂರು, ಜೂ.೨೯: ಕೊಡಗಿನಿಂದ ಯೂರೋಪ್ ಖಂಡದ ಸ್ಕಾಟ್ಲ್ಯಾಂಡ್ಗೆ, ರಷ್ಯಾ ಹಾಗೂ ಚೀನಾಗೆ ವಾಹನದಲ್ಲಿ ಚಲಿಸುವ ಸಾಹಸವನ್ನು ಕೊಡಗಿನ ದಂಪತಿ ಕೈಗೊಂಡಿದ್ದಾರೆ.
ವಿಶೇಷವಾಗಿ ವಿನ್ಯಾಸಗೊಳಿಸಿದ ತಮ್ಮ ಇಸುಝು಼ ವಾಹನದಲ್ಲಿ ಗುಡ್ಡೆಹೊಸೂರು ನಿವಾಸಿ ಕನ್ನಯ್ಯನ ಬಾಲಕೃಷ್ಣ-ರೇವತಿ ದಂಪತಿಯ ಪುತ್ರ ಉದ್ಯಮಿ ವಿನಯ್ ಹಾಗೂ ಅವರ ಪತ್ನಿ ಮೌನ ಅವರುಗಳು ಜೂನ್ ೫ ರಂದು ಪ್ರವಾಸ ಪ್ರಾರಂಭಿಸಿದ್ದಾರೆ.
ಮೂರು ತಿಂಗಳ ಪ್ರವಾಸದಲ್ಲಿ ಚೀನಾ, ರಷ್ಯಾ, ಯೋರೋಪ್, ನೇಪಾಳ ದೇಶಗಳಲ್ಲಿ ತಮ್ಮ ವಾಹನದಲ್ಲಿ ಪ್ರಯಾಣ ನಡೆಸುತ್ತಿದ್ದಾರೆ. ಇವರ ಪ್ರಯಾಣದ ಸಮಯ ೩ ತಿಂಗಳು ಹಾಗೂ ೩೦,೦೦೦ ಕಿ.ಮೀ ಕ್ರಮಿಸಲಿದ್ದಾರೆ.
ಪ್ರಸ್ತುತ ಇವರು ೭ ಸಾವಿರ ಕಿ.ಮೀ ಪ್ರಯಾಣಿಸಿ ಚೀನಾ ದೇಶ ತಲುಪಿದ್ದಾರೆ. ಇನ್ನೂ ೨೩ ಸಾವಿರ ಕಿ.ಮೀ ಪ್ರಯಾಣ ನಡೆಸಲಿದ್ದಾರೆ.