ಮಡಿಕೇರಿ, ಜೂ. ೨೯: ೨೦೨೫-೨೬ ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ರಿಲಾ ಸಾರಮ್ಮ ಅವರಿಗೆ ಬೆಂಗಳೂರಿನ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾಮರ್ಸ್ ವಿಭಾಗದಲ್ಲಿ ಕುಶಾಲನಗರ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಿಲಾ ೬೦೦ ಕ್ಕೆ ೫೯೪ ಅಂಕಗಳನ್ನು ಗಳಿಸಿದ್ದು. ಇವರು ರಜಾಕ್ ಹಾಗು ರಮಲತ್ ದಂಪತಿಯ ಪುತ್ರಿ.