ಮಡಿಕೇರಿ, ಜೂ. ೨೬: ಹಿಂದುತ್ವ ಎನ್ನುವುದು ಕೇವಲ ಉಪಾಸನೆ ಅಥವಾ ಧಾರ್ಮಿಕ ಆಚರಣೆಯಲ್ಲ; ಈ ನೆಲದ ಜನರ ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ರೂಪುಗೊಂಡ ಜೀವನ ಪದ್ಧತಿಯಾಗಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿದರು.

ಮಡಿಕೇರಿಯ ಕೊಡವ ಸಮಾಜದಲ್ಲಿ ಸಂಘದ ಶತಾಬ್ದಿ ಅಂಗವಾಗಿ ಆಯೋಜಿಸಿದ್ದ ಕೊಡಗು ಜಿಲ್ಲೆಯ ಪ್ರಬುದ್ಧ ನಾಗರಿಕರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂಘದ ಶತಾಬ್ಧಿ ಅಂಗವಾಗಿ ಕಳೆದ ವಿಜಯದಶಮಿಯಿಂದ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಂದಿನ ವಿಜಯದಶಮಿವರೆಗೆ ಈ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಿದರು. ರಾಷ್ಟಿçÃಯ ಸ್ವಯಂಸೇವಕ ಸಂಘದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಸ್ವಾತಂತ್ರ‍್ಯ ಹೋರಾಟದ ಹಿನ್ನೆಲೆಯನ್ನು ವಿವರಿಸಿದ ಅವರು, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟç ನಿರ್ಮಾಣ ಸಾಧ್ಯ ಎಂಬ ಉದ್ದೇಶದಿಂದ ೧೯೨೫ರಲ್ಲಿ ಸಂಘವನ್ನು ಆರಂಭಿಸಲಾಯಿತು ಎಂದರು.

ದೇಶ ಬಲಿಷ್ಠವಾಗಬೇಕಾದರೆ ನಾಗರಿಕರಲ್ಲಿ ದೇಶಭಕ್ತಿ, ರಾಷ್ಟಾçಭಿಮಾನ, ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಬೆಳೆಸಬೇಕು. ಕಳೆದ ನೂರು ವರ್ಷಗಳಿಂದ ಸಂಘವು ಪ್ರತಿದಿನ ಶಾಖೆಗಳ ಮೂಲಕ ಈ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿ, ಕಾರ್ಮಿಕ, ಧಾರ್ಮಿಕ ಸೇರಿದಂತೆ ಸುಮಾರು ೪೦ ಕ್ಷೇತ್ರಗಳಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಭಾರತ ಸೇರಿದಂತೆ ೬೧ ದೇಶಗಳಲ್ಲಿ ಸಂಘದ ಶಾಖೆಗಳಿವೆ. ದೇಶದಲ್ಲಿ ಸುಮಾರು ೧.೩೪ ಲಕ್ಷ ಶಾಖೆಗಳು ಹಾಗೂ ೧.೪೦ ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. ವಿಪತ್ತು ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸ್ವಯಂಸೇವಕರು ಸಮಾಜದ ನೆರವಿಗೆ ಧಾವಿಸುತ್ತಿದ್ದು, “ವಸುಧೈವ ಕುಟುಂಬಕA” ತತ್ವದಡಿ ಸಂಘ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಭಾರತವು ೭೬ ರಾಷ್ಟçಗಳಿಗೆ ಉಚಿತ ಲಸಿಕೆ ಪೂರೈಸಿರುವುದು ಇದೇ ಚಿಂತನೆಯ ಪ್ರತೀಕ ಎಂದು ಹೇಳಿದರು.

ಕುಟುಂಬಗಳಲ್ಲಿ ಸಂಸ್ಕಾರ, ತಾಯಂದಿರಿಗೆ ಗೌರವ, ಅತಿಥಿ ಸತ್ಕಾರ, ಪರಿಸರ ಸಂರಕ್ಷಣೆ, ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಅಗತ್ಯವಿದೆ. ಸ್ವದೇಶಿ ಉತ್ಪನ್ನಗಳ ಬಳಕೆ, ಮಾತೃಭಾಷೆಯಲ್ಲಿ ಸಂಭಾಷಣೆ ಮತ್ತು ನಾಗರಿಕ ಶಿಷ್ಟಾಚಾರಗಳ ಪಾಲನೆಯ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಂವಾದದಲ್ಲಿ ನಾಗರಿಕರು ಜಾತಿ ಸಮಸ್ಯೆ, ಮತಾಂತರ, ಲವ್ ಜಿಹಾದ್ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಪ್ರಶ್ನೆಗಳನ್ನು ಕೇಳಿದರು. ಪ್ರತಿಯೊಬ್ಬರೂ ಮನಸ್ಸು ಮಾಡಿದರೆ ಜಾತಿ ಸಮಸ್ಯೆ ನಿರ್ಮೂಲನೆ ಸಾಧ್ಯ. ಜಾತಿ ಹಾಗೂ ಮತಕ್ಕೂ ವ್ಯಕ್ತಿ ನಿರ್ಮಾಣಕ್ಕೂ ಯಾವುದೇ ಸಂಬAಧವಿಲ್ಲ. ಯಾರೇ ಆಗಿದ್ದರೂ ಮಹಾಪುರುಷರಾಗಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಚಿವರೊಬ್ಬರ ಸಂಘದ ಕುರಿತ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘದ ಸರಸಂಘಚಾಲಕರು ಈ ಕುರಿತು ಈಗಾಗಲೇ ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ. ತೆರೆದ ಮನಸ್ಸಿನಿಂದ ಪರಿಶೀಲಿಸಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಿಯಪ್ಪ, ವಿಭಾಗ ಸಹಕಾರ್ಯವಾಹ ಸುಭಾಷ್ ಚಂದ್ರ ಕಳೆಂಜ, ವಿಭಾಗ ಸಂಪರ್ಕ ಪ್ರಮುಖ್ ಪ್ರಿನ್ಸ್ ಗಣಪತಿ, ಜಿಲ್ಲಾ ಸಹಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿ.ಎ. ಹರೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮೇಜರ್ ಬಿದ್ದಂಡ ನಂಜಪ್ಪ, ಸಂಸ್ಕೃತ ಭಾರತಿ ವಿಭಾಗ ಸಂಯೋಜಕ ಮಧುಸೂಧನ್, ಡಿ.ಎಚ್. ತಮ್ಮಪ್ಪ, ಡಾ. ಜಯಲಕ್ಷಿö್ಮ ಮನೋಹರ್, ಜಿ. ಪಾಟ್ಕರ್, ನಗರ ಪ್ರಮುಖ್ ಸುನಿಲ್ ಕೋರನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯವಾಹ ರವಿ ಕುಶಾಲಪ್ಪ ಸ್ವಾಗತಿಸಿದರು. ಜಿಲ್ಲಾ ಸಂಪರ್ಕ ಪ್ರಮುಖ್ ನಂದಕುಮಾರ್ ವಂದಿಸಿದರು. ಜಿಲ್ಲಾ ಪ್ರಚಾರ ಪ್ರಮುಖ್ ಬಿ.ಎ. ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೆ.ಕೆ. ಮಹೇಶ್ ಕುಮಾರ್ ವಂದೇ ಮಾತರಂ ಗೀತೆ ಹಾಡಿದರು.